ಅಂತಾರಾಷ್ಟ್ರೀಯ ಜೈವಿಕ ವೈವಿಧ್ಯ ದಿನ
ಜೈವಿಕ ವೈವಿಧ್ಯ ಸಮಸ್ಯೆಗಳ ಅರಿವು ಮತ್ತು ಜಾಗೃತಿಯನ್ನು ಹೆಚ್ಚಿಸುವ ಮೇ 22ರಂದು ಇಂಟರ್ ನ್ಯಾಷನಲ್ ಡೇ ಫಾರ್ ಬಯೋಲಾಜೀಕಲ್ ಡೈವರ್ಸೀಟಿ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. 2000 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೇ 22ರಂದು ಅಂತಾರಾಷ್ಟ್ರೀಯ ಜೈವಿಕ ಜೈವಿಕ ವೈವಿಧ್ಯ ದಿನ ಎಂದು ಘೋಷಿಸಲಾಯಿತು.
ಜೈವಿಕ ವೈವಿಧ್ಯತೆ ಎಂಬ ಪದವನ್ನು ಮೊದಲ ಬಾರಿಗೆ 1968 ರಲ್ಲಿ ವನ್ಯಜೀವ ವಿಜ್ಞಾನಿ ಮತ್ತು ಸಂರಕ್ಷಕ ರೇಮಂಡ್ ಎಫ್.ಡೆಸ್ಮಾನ ಸೃಷ್ಟಿಸಿದರು. ಜೈವಿಕ ವೈವಿಧ್ಯ ಎಂಬುದು ಇಡಿ ಭೂಮಿಯಲ್ಲಿರುವ ಜೀವಸಂಕುಲಗಳ ಹಲವು ರೂಪ. ಜೈವಿಕ ವೈವಿಧ್ಯತೆ ವನ್ನು ನಿಸರ್ಗ ವ್ಯವಸ್ಥೆಯ ಆರೋಗ್ಯದ ಮಾನದಂಡವಾಗಿ ಬಳಸಲಾಗುತ್ತದೆ. ಜೈವಿಕ ವೈವಿಧ್ಯತೆ ಒಂದು ಪ್ರದೇಶದ ಜೀನ್ ಗಳು, ಪ್ರಭೇದಗಳು ಮತ್ತು ಪರಿಸರ ವ್ಯವಸ್ಥೆಗಳ ಸಪೂರ್ಣತೆಯನ್ನು ಉಲ್ಲಖೆಸುತ್ತದೆ. ಹವಾಮಾನ ಮತ್ತು ಅದರ ಬದಲಾವಣೆಯಿಂದಾಗುವ ಪರಿಣಾಮಗಳಾದ ಜೀವಿಗಳ ನಷ್ಟ. ಆವಾಸ ಸ್ಥಾನಗಳ ನಾಶ. ವಾಯು ಮಾಲಿನ್ಯ, ಶೋಷಣೆ ಮತ್ತು ಪರಿಣಾಮಗಳು ಸೇರಿದಂತೆ ಪರಿಸರ ಸಂರಕ್ಷಣೆಯಲ್ಲಿ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಜೈವಿಕ ವೈವಿಧ್ಯತೆ ಪದವನ್ನು ಬಳಸಲಾಗುತ್ತದೆ. ಜೈವಿಕ ವೈವಿಧ್ಯವು ಪ್ರಸ್ತುತ ಮತ್ತು ಭವಿಷ್ಯದ ಫೀಳಿಗಿಗೆ ಬಹು ದೊಡ್ಡ ಮೌಲ್ಯದ ಒಂದು ಜಾಗತಿಕ ಸ್ವತ್ತು ಎಂದು ಹೇಳಲಾಗುತ್ತದೆ. ಮಾನವ ಚಟುವಟಿಕೆಗಳಿಂದ ಇವುಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಹಾಗಾಗಿ ಪ್ರಪಂಚದಾದ್ಯಂತ ಇರುವ ಜೀವವೈವಿಧ್ಯದ ಸಂರಕ್ಷಣೆ ಮತ್ತು ಸಮರ್ಥ ಬಳಿಕೆಗಾಗಿ ವೈಜ್ಞಾನಿಕ ಮಾರ್ಗದರ್ಶನವನ್ನು ಅಭಿವೃದ್ದಿ ಮಾಡುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.
(ಸಂಗ್ರಹ: ಅರುಣ್ ಡಿ’ಸೋಜ)
ಚಿತ್ರ ಕೃಪೆ: ಇಂಟರ್ನೆಟ್ ತಾಣ