ಅಂದದ ಹೆಣ್ಣಿನ ಚಂದದ ಪಾದಕ್ಕೆ ಸಲಹೆಗಳು
ಹೆಣ್ಣು ಸೌಂದರ್ಯಕ್ಕೆ ಎಷ್ಟು ಪ್ರಾಮುಖ್ಯತೆ ಕೊಟ್ಟು ಸೌಂದಂiÀರ್i ಕಾಪಾಡಲು ಎಷ್ಟೆಲ್ಲಾ ಕಾಳಜಿ ವಹಿಸುತ್ತಾಳೋ, ಅದಕ್ಕಿಂತ ಹೆಚ್ಚಿನ ಕಾಳಜಿ, ಆರೋಗ್ಯದ ಕಡೆಗಿದ್ದರೆ ಆಕೆ ಎಲ್ಲರಿಗಿಂತ ಸೌಂದರ್ಯವತಿ ಎಂಬುದರಲ್ಲಿ ಎರಡು ಮಾತಿಲ್ಲ.
ಸೌಂದರ್ಯದ ಬಗ್ಗೆ ಕಾಳಜಿ ವಹಿಸುವ ಅನೇಕ ಮಹಿಳೆಯರು ತಮ್ಮ ಕೇಶರಾಶಿ, ಮುಖ, ಕೈಗಳ ಸೌಂದರ್ಯಕ್ಕಷ್ಟೇ ಹೆಚ್ಚು ನಿಗಾವಹಿಸುತ್ತಾರೆ. ಪಾದಗಳ ಸೌಂದರ್ಯದತ್ತ ಗಮನಹರಿಸುವುದು ಕಡಿಮೆ.
ಸುಂದರ ಯುವತಿಯೊಬ್ಬಳು ಬಹಳ ಚೆಂದದ ದುಬಾರಿ ಬೆಲೆಯ ಕಂಚಿ ಸೀರೆಯನ್ನುಟ್ಟು ನಡೆ ಯುತ್ತಿದ್ದಾಗ, ಅವಳ ಪಾದದ ಹಿಂಭಾಗಕ್ಕೆ ಸೀರೆಯ ಜರಿ ಸಿಕ್ಕಿ ಹಾಕಿಕೊಳ್ಳುತ್ತಿತ್ತು! ಆಕೆಯ ಪಾದ ಮೃದುತ್ವವನ್ನು ಕಳೆದುಕೊಂಡಿತ್ತು. ಪಾದದಲ್ಲಿನ ಬಿರುಕುಗಳು, ಸೀಳುಗಳಲ್ಲಿ ಸೀರೆಯ ಜರಿ ಸಿಕ್ಕಿ ಹಾಕಿ ಕೊಳ್ಳುತ್ತಿತ್ತು! ಯಾಕೆ ಹೀಗೆ ? ಇದಕ್ಕೆ ಪರಿಹಾರ? ಎಲ್ಲರ ಮುಂದೆ ಹೀಗಾದರೆ ಎಷ್ಟು ಅವಮಾನ ಎಂದು ಆ ಹುಡುಗಿಯ ಮನಸ್ಸು ಮುದುಡಿತು.
ಪಾದಗಳನ್ನು ಅಂದವಾಗಿ ಮೃದುವಾಗಿ ಆರೋಗ್ಯವಾಗಿ ಇಟ್ಟುಕೊಳ್ಳಲು ಇಲ್ಲಿವೆ ಕೆಲವು ಸಲಹೆಗಳು.
ಎಳೆ ಮಗುವಿನ ಪಾದ ಎಷ್ಟು ಮೃದು, ಎಷ್ಟು ನುಣುಪು. ಅಂತಹ ಪಾದಗಳನ್ನು ಮುದ್ದಿಡು ತ್ತೇವೆ, ಕೆನ್ನೆಗೆ ಸವರಿಕೊಳ್ಳುತ್ತೇವೆ. ಮಗು ಬೆಳೆಯುತ್ತಾ ಹೋದಂತೆ ಪಾದ ಸ್ವಲ್ಪ ಗಟ್ಟಿಯಾಗುತ್ತಾ ಹೋಗು ವುದು.
20-25 ವರ್ಷದವರೆಗೆ ಹೆಣ್ಣು ಮಕ್ಕಳು ಏನೂ ಕೆಲಸ ಮಾಡದೆ ನಾಜೂಕಾಗಿದ್ದಲ್ಲಿ ಪಾದಗಳು ಸುಂದರವಾಗಿರುವುವು. ನಂತರದಲ್ಲಿ ಮನೆ ಕೆಲಸ, ಓಡಾಟ, ಉದ್ಯೋಗ ಇವುಗಳೆಲ್ಲಾ ಶುರುವಾದಂತೆ ಪಾದದ ಕಡೆಗೆ ಗಮನವೂ ಕಡಿಮೆಯಾಗುವುದು. ನಡೆಯುತ್ತಾ ಹೋದಂತೆ ಹಲವೆಡೆ ದೇಹದ ಭಾರ ದಿಂದ ಹಾಗೂ ನಡೆಯುವಾಗ ಆಗುವ ಒತ್ತಡದಿಂದ ಪಾದದ ಚರ್ಮದ ಮೇಲ್ಪದರದ ಕೆರಾಟಿನ್ ದಪ್ಪ ಗಾಗುತ್ತಾ ಹೋಗುವುದು. ಈ ದಪ್ಪದಾದ ಕೆರಾಟಿನ್ ಅನ್ನು ಚೆನ್ನಾಗಿ ಉಜ್ಜಿ ಕರಗಿಸದೇ ಹೋದಲ್ಲಿ ಅದು ಗಟ್ಟಿಯಾಗುವುದು.ಸೀಳುವುದು. ಪಾದದ ಹಿಂಭಾಗ(ಹಿಮ್ಮಡಿ), ಹೆಬ್ಬೆಟ್ಟಿನ ಹಿಂಭಾಗದಲ್ಲಿ ಚರ್ಮವನ್ನು ಮುಟ್ಟಿ ನೋಡಿ,ಅದು ಪಾದದ ಇತರೇ ಭಾಗಕ್ಕಿಂತ ಗಟ್ಟಿ, ಸ್ಪರ್ಷ ಜ್ಞಾನವೂ ಸ್ವಲ್ಪ ಕಡಿಮೆ.
ಹಿಂದಿನ ಕಾಲದಲ್ಲಿ ಬಾತ್ ರೂಮಿನಲ್ಲಿ ಚಪ್ಪಡಿ ಕಲ್ಲಿನ ನೆಲವಿರುತ್ತಿತ್ತು. ಕಾಲುಗಳನ್ನು ಸ್ನಾನ ಮಾಡುವಾಗ ಕಲ್ಲಿನ ಮೇಲೆ ಉಜ್ಜುವುದು ಅಥವಾ ಕೆಲವರು ತಿಕ್ಕಲು ಬೆಣಚು ಕಲ್ಲು ಬಳಸುತ್ತಿದ್ದು, ಕೆರಾಟಿನ್ ಪದರವನ್ನು ತೆಗೆಯಲು ಸಹಕಾರಿಯಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಯ ಬಾತ್ ರೂಮ್ ನೆಲದಲ್ಲೂ ವಿವಿಧ ರೀತಿಯ ಸುಂದರವಾದ ಟೈಲ್ಸ್. ಅದರ ಮೇಲೆ ಕಾಲುಜ್ಜುವುದು ಕಷ್ಟ. ಪಾದದ ರಕ್ಷಣೆಗೆ ಅದರಿಂದೇನೂ ಉಪಯೋಗವಿಲ್ಲ ಹಾಗೂ ತುಂಬಾ ನುಣುಪಾದ ಟೈಲ್ಸ್ ಹಾಕಿದಲ್ಲಿ ಜಾರಿಬಿದ್ದು ಕಾಲು ಮುರಿದುಕೊಳ್ಳುವುದಂತೂ ಗ್ಯಾರೆಂಟಿ.
ಸ್ನಾನ ಮಾಡುವಾಗ ಪಾದಗಳ ಸ್ವಚ್ಛತೆ, ರಕ್ಷಣೆಗಾಗಿ ಪಾದ ಉಜ್ಜಲು ಬ್ರಷ್ , ಸ್ಕ್ರಬ್, ಪ್ಯೂಮಿಸ್ ಸ್ಟೋನ್ ಬಳಸಬೇಕು. ಮೆಟಲ್ ಫುಟ್ ಸ್ಕ್ರೇಪರ್ ಬಳಸಿ ಎರಡು ಮೂರು ನಿಮಿಷ ವಾದರೂ ಪಾದಗಳನ್ನು ತಿಕ್ಕಬೇಕು. .(ಸೌಂದರ್ಯವರ್ಧಕಗಳನ್ನು ಮಾರುವ ಅಂಗಡಿಗಳಲ್ಲಿ ಫುಟ್ ಸ್ಕ್ರೇಪರ್ ದೊರಕುವುದು).
* ದಿನ ನಿತ್ಯ ಮಲಗುವಾಗ ಪಾದಗಳಿಗೆ ಮಾಯಿಶ್ಚರೈಸರ್ ಹಚ್ಚಬೇಕು. ಪಾದ ಗಟ್ಟಿಯಾಗಿದ್ದಲ್ಲಿ, ಸ್ಯಾಲಿಸಿಲಿಕ್ ಆಸಿಡ್ ಇರುವ ಒಂದು ಮುಲಾಮನ್ನು ಕೊಂಡು ದಿನನಿತ್ಯ ರಾತ್ರಿ ಹಚ್ಚಿದಲ್ಲಿ ಕೆರಾಟಿನ್ ಪದರ ಮೃದುವಾಗುವುದು .
* ಬೆಚ್ಚಗಿನ ನೀರಿನಲ್ಲಿ 15-20 ನಿಮಿಷ ಪಾದಗಳನ್ನು ಇಟ್ಟು ನಂತರದಲ್ಲಿಯೂ ಫುಟ್ ಸ್ಕ್ರೇಪರ್ ನಿಂದ ತಿಕ್ಕಬಹುದು.ಬೇಕಿದ್ದಲ್ಲಿ ನೀರಿಗೆ ಒಂದರ್ಧ ಚಮಚ ಶ್ಯಾಂಪೂ ಹಾಕಬಹುದು.
* ಪಾದಕ್ಕೆ, ಕಾಲುಗಳ ಬೆರಳುಗಳಿಗೆ ಕೆಲ ವ್ಯಾಯಾಮಗಳನ್ನು ಮಾಡುವುದರಿಂದ ರಕ್ತ
ಸಂಚಲನೆಯೂ ಉತ್ತಮಗೊಳ್ಳುವುದು.
* ಬೇಸಿನ್ ನಲ್ಲಿ ಸಣ್ಣ ಸಣ್ಣ ನುಣುಪಾದ ಕಲ್ಲುಗಳನ್ನು ಹಾಕಿ ಅದರ ಮೇಲೆ ಪಾದಗಳನ್ನು ಆಡಿಸಬಹುದು. ಕಾಲಿನ ಬೆರಳುಗಳಿಂದ ಆ ಕಲ್ಲುಗಳನ್ನು ಹೆಕ್ಕಿ ತೆಗೆದು ಪಕ್ಕಕ್ಕಿಡಲು ಪ್ರಯತ್ನಿಸಬೇಕು. ಪಾದದ ಅಡಿ ಒಂದು ಚೆಂಡನ್ನಿಟ್ಟು ಅದರ ಮೇಲೆ ಪಾದವನ್ನು ಆಡಿಸಬಹುದು.
* ಬೆಚ್ಚಗಿನ ನೀರಿಗೆ ಒಂದು ಟೇಬಲ್ ಚಮಚ ಬೇಕಿಂಗ್ ಪೌಡರ್ ಹಾಗೂ ಒಂದರ್ಧ ಚಮಚ ಆಲಿವ್ ಎಣ್ಣೆ ಹಾಕಿ 10 ನಿಮಿಷಗಳ ಕಾಲ ಅದರಲ್ಲಿ ಪಾದಗಳನ್ನು ಇಡಬೇಕು.
* ನಂತರದಲ್ಲಿ ಪಾದಗಳನ್ನು ಚೆನ್ನಾಗಿ ಸಾಬೂನಿನಿಂದ ತೊಳೆದು ಒಣಗುವಂತೆ ಬಟ್ಟೆಯಿಂದ ಒರೆಸಿ ಮಾಯಿಸ್ಚರೈಜರ್ ಹಚ್ಚಬೇಕು.
* ಪಾದಗಳಿಗೆ ರಾತ್ರಿ ಮಲಗುವ ಮುನ್ನ ಲೋಶನ್, ಕ್ರೀಂ ಹಚ್ಚಿದ ನಂತರ ಸಾಕ್ಸ್ ಧರಿಸಿದಲ್ಲಿ ಹಾಸಿಗೆಯು ಕೊಳೆಯಾಗುವುದನ್ನು ತಡೆಯಬಹುದು.
* ಪಾದವು ಗಟ್ಟಿಯಾಗಿ, ಸೀಳಿದಂತಾಗಿ ಒಡೆದಿದ್ದರೆ ಅದು ಸೋಂಕನ್ನು ಸಹಾ ಆಹ್ವಾನಿಸುವುದು. ಮೃದುವಾದ ಪಾದ ಸೌಂದರ್ಯಕ್ಕಷ್ಟೇ ಸೀಮಿತವಲ್ಲ. ಬಿರುಕಿನ ಪಾದ ಬೇಗ ಸೋಂಕಿಗೆ ತುತ್ತಾಗುವುದು. ಸೋಂಕಿನಿಂದುಂಟಾಗುವ ನೋವಿನಿಂದ ಕೆಲವೊಮ್ಮೆ ನಡೆಯಲೂ ಸಹ ಕಷ್ಞವಾದ ಪರಿಸ್ಥಿತಿಯುಂಟಾಗು ವುದು.
* ಮಾರ್ಕೆಟಿನಲ್ಲಿ ಹೀಲ್ ಅಥವಾ ಫುಟ್ ಕೇರ್ ಮತ್ತು ಕಾಲಿನ ಕ್ರಾಕ್ ತಡೆಗಟ್ಟುವ ಕ್ರೀಂ ಎಂದೆಲ್ಲಾ ಅನೇಕ ವಿವಿಧ ಕ್ರೀಂಗಳು ಲಭ್ಯವಿದ್ದರೂ ಸಹಾ ಔಷಧಿ ಅಂಗಡಿಗಳಿಗೆ ತೆರಳಿ ಸ್ಯಾಲಿಸಿಲಿಕ್ ಆಸಿಡ್ ಇರುವಂತಹ ಮುಲಾಮನ್ನು ಖರೀದಿಸಿ (ಉದಾ: ಬಿ-ಟೆಕ್ಸ್).
* ಮೃದುವಾದ ಸುಂದರವಾದ ಪಾದಗಳ ಸ್ಪರ್ಷ ಜ್ಞಾನವೂ ಸೂಕ್ಷ್ಮವಾದ್ದರಿಂದ, ಕಾಮೋದ್ರೇಕಕ್ಕೂ ಸಹ ಪಾದ ಸ್ಪರ್ಷ ಸಹಕಾರಿ.ಪಾದಗಳು ಮುತ್ತಿಕ್ಕುವಂತಿರಲಿ.
ಬಿಡುವಿನ ವೇಳೆಯಲ್ಲೂ ಸಹ ಪಾದಗಳನ್ನು ಉಜ್ಜಿ ಕೆರಾಟಿನ್ ಪದರವನ್ನು ಕರಗಿಸಲು ಫುಟ್ ಸ್ಕ್ರೇಪರ್ ಗಳು ಲಭ್ಯ. ಫುಟ್ ಸ್ಕ್ರೇಪರ್ಗಳು ತುರಿಯೋಮಣೆಯಂತೆ ಕಾಣುವುದು.ವಿಧ ವಿಧವಾದ ಫುಟ್ ಫೈಲ್ ಹಾಗೂ ಫುಟ್ ಸ್ಕ್ರೇಪರ್ಗಳು ಮಾರುಕಟ್ಟೆಯಲ್ಲಿ ಲಭ್ಯ.ಸೌಂದರ್ಯ ಹೆಣ್ಣುಮಕ್ಕಳ ಪಾದಗಳಿಗಷ್ಟೇ ಸೀಮಿತವಲ್ಲ.ಪುರುಷರ ಪಾದಗಳು ಸಹ ಬಿರುಕಿನಿಂದ ಮುಕ್ತವಾಗಿರಬೇಕು.
ಸಕ್ಕರೆ ಖಾಯಿಲೆಯವರು ಪಾದಗಳ ಆರೋಗ್ಯದ ಬಗ್ಗೆ ಹೆಚ್ಚು ಗಮನವಹಿಸಬೇಕು.
ಪಾದಗಳ ಆರೋಗ್ಯ ಹಾಗೂ ಸೌಂದರ್ಯಕ್ಕೆ ಪಾದಗಳಿಗೆ ಸರಿಹೊಂದುವಂಥಹ ಮೃದುವಾದ ಚಪ್ಪಲಿ zsರಿಸುವುದೂ ಸಹ ಮುಖ್ಯ.ಸಾಕ್ಸ್ ತೊಡುವುದು ಪಾದಗಳನ್ನು ರಕ್ಷಿಸುವುದಾದರೂ ಸದಾ ಕಾಲಿಗೆ ಸಾಕ್ಸ್ ತೊಟ್ಟು ಓಡಾಡುವುದನ್ನು ತಡೆಯಬೇಕು.
ಡಾ.ಶಶಿಕಲಾ .ಪಿ. ಕೃಷ್ಣಮೂರ್ತಿ.ದಾವಣಗೆರೆ.