ಅಂದಿನ ಕೊರೋನಾ ಕಾಲದ ನೆನಪು

ಅಂದಿನ ಕೊರೋನಾ ಕಾಲದ ನೆನಪು

ಕೊರೊನಾ ನಮ್ಮ ನಾಡಿಗೆ ಬಂದಾಗ ಆದ ವಸ್ತು ಸ್ಥಿತಿ ಇಂದಿಗೂ ಹಾಗೇ ಇದೆ. ಜೊತೆಗೆ ಖಾಸಗಿಯಲ್ಲಿ ದುಡಿವ ಮಧ್ಯಮ ಕುಲದವರ ಪಾಡಿನ ಹಾಡಿಗೆ ಕೊನೆಯಿಲ್ಲವೆ ? ನಮ್ಮ ನಾಡಿನಲ್ಲಿ ಒಂದು ಪ್ರಾಣಿ  ಅಸಹಜ ರೀತಿಯಲ್ಲಿ ಸತ್ತರೂ ಕೇಳಲು ಸಂಘ ಸಂಸ್ಥೆಗಳಿದ್ದಾವೆ. ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತ ಕೊರೊನಾದ ದಿಸೆಯಿಂದ ಕೆಲಸ ಕಳೆದುಕೊಂಡ ಸಂಬಳವಿಲ್ಲದೆ ಅತಂತ್ರನಾಗಿ ಮನೆಯಲ್ಲಿ ಕೂತ ಯಾವ ಖಾಸಗಿ ಅಧ್ಯಾಪಕರಿಗೆ ಮತ್ತು ಅಲ್ಲಿಯ ಇನ್ನಿತರ ಕೆಲಸಗಾರರಿಗೆ ಯಾವ ಸಂಘವು ಇಲ್ಲ ಸಂಸ್ಥೆಗಳೂ ಇಲ್ಲ ಸರಕಾರವಂತೂ ಇಲ್ಲವೇ ಇಲ್ಲ ?! ಎಲ್ಲಾ ವಿಷಯಗಳಿಗೂ ಜನಸಾಮಾನ್ಯರು ಅರ್ಜಿ ಕೊಟ್ಟೇ ಕೆಲಸ ಆಗಬೇಕು ಎಂದಿದ್ದರೆ ನಮಗಿವರ ಅಗತ್ಯ ಇದೆಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ ! ಹೌದಲ್ವಾ ?

ಈಗಿನ ವಾತಾವರಣದಲ್ಲಿ ಅನೇಕ ಅನುದಾನ ರಹಿತ ಶಾಲೆಗಳು ಶಾಶ್ವತ ಬಾಗಿಲು ಹಾಕುವ ಕೆಲಸ ಮಾಡಿಯಾವು . ಇಲ್ಲಿಯವರೆಗೂ ಶೇಕಡಾ ೨೦ ರಷ್ಟೂ ವಿಧ್ಯಾರ್ಥಿಗಳು ಹೊಸದಾಗಿ ಸೇರಿಲ್ಲ. ಹಳೆ ವಿಧ್ಯಾರ್ಥಿಗಳೂ ಹಣ ಕಟ್ಟಿಲ್ಲ . ಮೆನೇಜ್ ಮೆಂಟ್ ಅಲ್ಲಿಯ ನೌಕರರಿಗೆ ಸಂಬಳ ನೀಡುವುದು ಹೇಗೆ ? ಹೀಗಾದರೆ ನೌಕರರ ಗತಿಯೇನು ? ಮುಂದಿನ ದಾರಿಯ ಬಗ್ಗೆಯೂ ಸರಕಾರ ಯೋಚಿಸಬೇಕಾಗುತ್ತದೆ. ಈಗ ನಾನೇ ಉದಾಹರಣೆಯಲ್ಲಿರುವೆ. ನನಗೆ ಮಾರ್ಚ್ ೧೬ ರಿಂದ ವೇತನವಿಲ್ಲ ಶಾಲೆ ಪ್ರಾರಂಭ ಯಾವತ್ತೊ ಗೊತ್ತಿಲ್ಲ. ಹೆಚ್ಚಿನ ಖಾಸಗಿ ಶಾಲೆಯಲ್ಲಿಯ ದೈಹಿಕ ಶಿಕ್ಷಕರು, ಡ್ರಾಯಿಂಗ್ ಅಧ್ಯಾಪಕರು, ಟೈಲರಿಂಗ್, ಕರಾಟೆ, ಕ್ರ್ಯಾಪ್ಟ್, ಮ್ಯಾಕಾನಿಕಲ್, ಕಂಪ್ಯೂಟರ್ ಮತ್ತು ಕೆಳಗಿನ ತರಗತಿಯ ಅಧ್ಯಾಪಕರನ್ನ ಸಂಬಳ ರಹಿತರನ್ನಾಗಿ ಮನೆಗೆ ಕಳುಹಿಸಿದ್ದಾರೆ. ಇದರ ಬಗ್ಗೆ ನಾನು ಇಂದು ಅಥವ ನಾಳೆ ನೇರವಾಗಿ ನಮ್ಮ ಪ್ರಧಾನಿಗಳಿಗೆ ಟ್ವೀಟ್ ಮಾಡಲಿದ್ದೇನೆ. ನಮ್ಮ ರಾಜ್ಯ ಸರಕಾರಕ್ಕೆ ಎಲ್ಲರಿಗೂ ಈ ಬಗ್ಗೆ ಹೇಳಿ ನಿತ್ರಾಣಗೊಂಡಿದ್ದೇನೆ. ಇನ್ನೂ ಏನಿದ್ದರೂ ಪ್ರಧಾನಿಗಳ ಹತ್ತಿರವೇ ಮಾತನಾಡಬೇಕು .ಅಲ್ಲಿಗೂ ನ್ಯಾಯ ಸಿಗಲಿಲ್ಲವೆಂದರೆ ಮುಂದಿನ ನಡೆ ನೋಡಬೇಕು . ತುಂಬಾ ಬೇಸರದಲ್ಲಿ ಇಷ್ಟು ಬರೆಯಬೇಕಾಯಿತು. ಇನ್ನು ಅದನ್ನೇ ನಂಬಿದವರ ಬದುಕು ಹೇಗ್ಗಿದ್ದೀತು ? ಶಿವನೇ ಶಂಭು ಲಿಂಗಾ...? ಹೆಚ್ಚು ಹೇಳಲು ಏನಿದೆ ? ಹೊಟ್ಟೆ ಹಸಿವು ಎಲ್ಲವನ್ನೂ ಬರೆಸುತ್ತಿದೆ ... ಜೈ ಹೊ

(ಮೂರು ವರ್ಷದ ಹಿಂದೆ ಸ್ವತಃ ಅನುಭವಿಸಿ ಅಂದು ಹೊಟ್ಟೆ ಹಸಿವಲ್ಲಿ ಬರೆದ ಲೇಖನ)

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ