ಅಂದು ಇಂದಿರ ಇಂದು ಸೋನಿಯಾ

ಅಂದು ಇಂದಿರ ಇಂದು ಸೋನಿಯಾ

ಮಹನೀಯರೇ, ಈಗಾಗಲೇ ನೀವೆಲ್ಲರೂ ಮಾಧ್ಯಮಗಳಲ್ಲಿ ಶನಿವಾರ ತಡ ರಾತ್ರಿಯಿಂದ ರಾಮ್ ಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹದಲ್ಲಿ ನಿರತರಾಗಿದ್ದ ಯೋಗ ಗುರು ಬಾಬಾ ರಾಮ್ ದೇವ್ ಹಾಗೂ ಅವರ ಬೆಂಬಲಿಗರ ಮೇಲೆ ಪೊಲೀಸರು ದಾಳಿ ನಡೆಸಿದ್ದು. ಅಲ್ಲಿ ನೆರೆದಿದ್ದ ಸಾವಿರಾರು ಜನ ಬೆಂಬಲಿಗರ ಮೇಲೆ ಲಾಟಿ ಚಾರ್ಜ್ ಮಾಡಿದ್ದು. ಆಶ್ರುವಾಯು ಸಿಡಿಸಿದ್ದು. ಆ ಗೊಂದಲದಲ್ಲಿ ಕಾಲ್ತುಳಿತ ಗಾಯಗಳಾಗಿದ್ದು ಅಲ್ಲಿಂದ ಬಾಬಾ ರಾಮ್ ದೇವ್ ಅವರು ಪೊಲೀಸರಿಂದ ತಪ್ಪಿಸಿಕೊಂಡು ಬಂದದ್ದು ಎಲ್ಲವನ್ನೂ ನೋಡಿರುತ್ತೀರಿ. ನೆನ್ನೆ ನಡೆದ ಈ ದಾಳಿ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾಡಿದ ಘೋರ ಅವಮಾನ ಅಲ್ಲವೇ?



ಇಷ್ಟಕ್ಕೂ ಬಾಬಾ ಮಾಡಿದ ತಪ್ಪೇನೂ? ರಾಜಕೀಯವ್ಯಕ್ತಿಗಳು ಆಕ್ರಮವಾಗಿ ಸಂಪಾದಿಸಿ ಬಚ್ಚಿಟ್ತಿರುವ ಕಪ್ಪು ಹಣವನ್ನು ವಿದೇಶಿ ಬ್ಯಾಂಕ್‌ಗಳಿಂದ ವಾಪಸ್ ತನ್ನಿ ಎಂದಿದ್ದೆ ತಪ್ಪಾಯಿತೇ? ಸ್ವಾತಂತ್ರ್ಯ ಭಾರತದಲ್ಲಿ ಇದನ್ನು ಕೇಳಿದ್ದು ತಪ್ಪಾಯಿತು.
 


 


ಅದಕ್ಕೆ ತಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ಒತ್ತಾಯಿಸಿ ರಾಮ್ ಲೀಲಾ ಮೈದಾನದಲ್ಲಿ ಉಪವಾಸ ನಿರತರಾಗಿದ್ದ ಬಾಬಾ ರಾಮ್ ದೇವ್ ಹಾಗೂ ಆತನ ಬೆಂಬಲಿಗರನ್ನು ಬಂಧಿಸಲು ಆದೇಶ ನೀಡಿದ್ದು.



ಬಾಬಾರವರನ್ನು ಬಂಧಿಸಬೇಕಾದರೆ ಮರುದಿನ ಬೆಳಿಗ್ಗೆ ಹೋಗಿ ಬಂಧಿಸಬೇಕಾಗಿತ್ತು. ಅದು ಬಿಟ್ಟು ರಾತ್ರೋರಾತ್ರಿ ಉಪವಾಸದಿಂದ ಬಳಲಿ ನಿದ್ರೆಯಲ್ಲಿದ್ದವರ ಮೇಲೆ ಏಕಾಏಕಿ ದಾಳಿ ಮಾಡಿಸಿದ್ದರ ಹಿಂದಿನ ಉದ್ದೇಶವೇನಿತ್ತು. ಅಲ್ಲಿ ನೆರೆದಿದ್ದವರಲ್ಲಿ ಮಹಿಳೆಯರು, ಮಕ್ಕಳು , ವೃದ್ಧರು ಎಲ್ಲರ ಮೇಲೂ ಬಲಪ್ರಯೋಗ ಮಾಡಿ ಲಾಟಿಯ ರುಚಿ ತೋರಿಸಿ ಆಶ್ರುವಾಯು ಸಿಡಿಸಿ ಆ ಹೊತ್ತಿನಲ್ಲಿ ಮೈದಾನವನ್ನು ಖಾಲಿ ಮಾಡಿಸುವ ಅವಸರವೇನಿತ್ತು?.
 


 


ಇಷ್ಟೆಲ್ಲಾ ಮಾಡಿಯೂ ಈ ದಾಳಿಯನ್ನು ಸಮರ್ಥಿಸಿಕೊಳ್ಳುವ ಕೇಂದ್ರ ಸರ್ಕಾರದ ಧೋರಣೆಗೆ ಏನನ್ನಬೇಕು?
 


 


ನೆನ್ನೆ ನಡೆದ ಈ ದಾಳಿ ಹಲವರಿಗೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ನೆನಪಿಸಿದರೆ ಮತ್ತೆ ಕೆಲವರಿಗೆ ೧೯೭೫-೭೭ ರವರೆಗಿನ ತುರ್ತು ಪರಿಸ್ಥಿತಿಯನ್ನು ನೆನಪಿಸಿತು. ಅಂದಿನ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ್ದ ದಿವಂಗತ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಹಾದಿಯಲ್ಲೇ ಅವರ ಮುದ್ದಿನ ಸೊಸೆ ವಿದೇಶಿ ಮಹಿಳೆ ಭಾರತದ ಕಾಂಗ್ರೆಸ್ ಪಕ್ಷದ ಸೂತ್ರಧಾರಿ ಸೋನಿಯಾ ಗಾಂಧಿ ಸಹ ಅದೇ ಹಾದಿಯಲ್ಲಿ ಹೋಗುತ್ತಿರುವುದು ವಿಪರ್ಯಾಸ. 
  


ಇನ್ನಾದರೂ ಭಾರತದ ಜನತೆ ಸರ್ಕಾರವನ್ನು ಆರಿಸುವಲ್ಲಿ ಸ್ವಲ್ಪ ಬುದ್ಧಿ ಉಪಯೋಗಿಸಿದರೆ ಉತ್ತಮ.


ಚಿತ್ರ ಕೃಪೆ : ಅಂತರ್ಜಾಲ


 


 

Comments