ಅಂಧರ ಬಯಕೆ

ಅಂಧರ ಬಯಕೆ

ಕವನ

ನಾವು ಕಾಣಬಯಸುವೆವು ಜಗದ ಅಂದವ

ಆದರೆ ಆ ದೇವರು ನಮಗೆ ನೀಡಿರುವ ಅಂಧತ್ವವ

 

ಬಣ್ಣಗಳನ್ನು ಕಾಣುವ ಬಯಕೆ ನನ್ನದು

ಕಪ್ಪು ಬಣ್ಣವನ್ನು ಬಿಟ್ಟು ಬೇರೇನು ತಿಳಿಯದು

ಕತ್ತಲು ರಾಜ್ಯದ ದೊರೆ ನಾನಾಗಿರುವೇ

ಬೆಳಕನ್ನು ಕಾಣಲು ಪರಿತಪಿಸುತಲಿರುವೇ

!!ನಾವು ಕಾಣಬಯಸುವೆವು ಜಗದ ಅಂದವ!!

 

ಆ ದೇವನು ಸವಿ ಸವಿಯಲು ನಾಲಿಗೆ ಕೊಟ್ಟ

ಸ್ವಾದವನ್ನು ಆಸ್ವಾದಿಸುವ ನಾಸಿಕವನ್ನು ಕೊಟ್ಟ

ಧ್ವನಿ ಕೇಳಲು ಕಿವಿಯನ್ನು ಕೊಟ್ಟ 

ನೋಡುವ ಕಣ್ಣುಗೆ ದೃಷ್ಟಿ ನೀಡುವುದನ್ನು ಮರೆತುಬಿಟ್ಟ

!!ನಾವು ಕಾಣಬಯಸುವೆವು ಜಗದ ಅಂದವ!!

 

ಆ ದೇವನು ನಡೆಯಲೆರಡು ಕಾಲುಗಳನ್ನು ಕೊಟ್ಟ

ದುಡಿಯಲೆರಡು ಕೈಗಳನ್ನು ಕೊಟ್ಟ

ಸವಿ ನುಡಿಯ ನುಡಿಯಲು ಬಾಯನ್ನು ಕೊಟ್ಟ

ಜಗವ ಕಾಣುವ ಬಯಕೆಗೆ ಬೆಂಕಿಯನಿಟ್ಟು ಬಿಟ್ಟ

!!ನಾವು ಕಾಣಬಯಸುವೆವು ಜಗದ ಅಂದವ!!

 

ಕರುಣೆ ಇಲ್ಲದ ದೇವನು ನಮ್ಮಯ ಕಣ್ಣುಗಳನ್ನು ಕಿತ್ತುಕೊಂಡನು

ಕರುಣೆಯುಳ್ಳ ನೇತ್ರದಾನಿಯು ನಮ್ಮಯ ಪಾಲಿಗೆ ದೇವನಾದನು

ನಾವು ಬೇಡಿಕೊಳ್ಳುವೆವು ಜನರೇ ಮಾಡಿ ನೀವು ನೇತ್ರದಾನವನ್ನು

ನೀವು ಸತ್ತ ನಂತರ ನೀಡಿದಂತಾಗುತ್ತದೆ ಅಂಧರ ಬಾಳಿಗೆ ದೃಷ್ಟಿಯೆಂಬ ಬೆಳಕನ್ನು

!!ನಾವು ಕಾಣಬಯಸುವೆವು ಜಗದ ಅಂದವ!!

 

-ತುಂಬೇನಹಳ್ಳಿ ಕಿರಣ್ ರಾಜು ಎನ್

ಚಿತ್ರ : ಇಂಟರ್ನೆಟ್ ತಾಣ

 

ಚಿತ್ರ್