ಅಕ್ಕ ತಮ್ಮರ ಅನುಬಂದದ ಗೀತೆ

ಅಕ್ಕ ತಮ್ಮರ ಅನುಬಂದದ ಗೀತೆ

ಬರಹ

ತವರು ಮನೆಗೆ ಬಾರೆ ನನ್ನ ಅಕ್ಕಯ್ಯ   

ತಂದು  ನಿಂತಿರುವ ಗಾಡಿಯ ನಿನ್ನ ತಮ್ಮಯ್ಯ

ಅಕ್ಕಯ್ಯ ನನ್ನ ಅಕ್ಕಯ್ಯ   ಅಪ್ಪ ಅಮ್ಮ ನಿಲ್ಲದ ನನ್ನ

ತುಪ್ಪ ಅನ್ನ ಹಾಕಿ ಸಾಕಿದೆ ಅಕ್ಕಯ್ಯ "ಪಲ್ಲವಿ"

ನಾಲ್ಕು ಜನ ಮಕ್ಕಳಲ್ಲ ಕೇಳು ಅಕ್ಕಯ್ಯಅವರೊಳಗೆ

 ನಾ ಮಗನಾಗೆ ನಾಲ್ಕು ದಿನ ನಿನ್ನ ಸೇವೆ ಮಾಡುವೆ ನಿನಗೆ

ಹರಸಿ ಆಶೀರ್ವದಿಸು ಕರುಳಾ ಗೆಳತಿ ನೀ ನನಗೆ ಅಕ್ಕಯ್ಯ "ತವರು"

ತಾಯಿಲ್ಲ ತಂದಿಲ್ಲ ತವರಿನ ಹಂಗೇನು ಎಂದು ಹೇಳದಿರು

ಅಕ್ಕಯ್ಯ ತಾಯಿ ನೀನು ನನಪಲಿಗಲ್ಲವೇನು ನಿನ್ನ ಮಗನು

ತಬ್ಬಲಿಯಾಗುವುದು ನಿನಗೆ ಹಿತವೇನು ಅಕ್ಕಯ್ಯ "ತವರಿಗೆ"

ನಿನ್ನ ಮಕ್ಕಳು ನಿನ್ನ ಮುತ್ತಂತೆ ಕಾಣಬಹುದು ಅಕ್ಕಯ್ಯ

ಮನೆತುಂಬ ಮಕ್ಕಳು ನನಗೆ ಬಡತನವು ಕೇಳವ್ವ

ಕಾಯಿಲೆಯೊಳಗೆ ಹಾಸಿಗೆ ಹಿಡಿದಿಹಳು ಹೆಂಡತಿ

ಕಷ್ಟದಲ್ಲಿರೋ ನನ್ನ ನೋಡೊಕಾದರು ಬಾ ಕರುಳಾ ಗೆಲತಿ"ತವರು"

ಹಣಾ ಕಾಸು ಇದೆ ಎಂದು ಕೇಳಾಕ್ ನಾನು ಬಂದೋನಲ್ಲ

ಗುಣತುಂಬಿರೊನಿನ್ನ ಜಾತ್ರೆಗೆ ಕರಕೊಂಡು ಹೊಗಾಕೆ ಬಂದೆನಲ್ಲ

ಅಪ್ಪ ಅಮ್ಮ ಹೊದಮ್ಯಾಲೆ ಊರಲ್ ಹಬ್ಬ ಮಾಡ್ಲೆ ಇಲ್ಲ

ಈ ವರ್ಷ ಮಾಡ್ತಾರಲ್ಲ ನೀ ಬರ್ತೀಯಲ್ಲ ಅಕ್ಕಯ್ಯ "ತವರಿಗೆ"

ಮಾರಮ್ಮನ ಜಾತ್ರೆಗೆ ಮೊರ್ ದಿನ ಮುಂಚೆ ಬಾರೆ ಅಕ್ಕಯ್ಯ

ಮನೆ ಒಪ್ಪ ಓರಣ ಮಾಡುವರಿಲ್ಲ ಅಕ್ಕಯ್ಯ

ನನಗೆ ನಿನ್ನ ಬಿಟ್ಟರೆ ಯಾರಿಹರು ಅಕ್ಕಯ್ಯ

ನೀ ಬರಲು ಮಾಡುವೆ ಮನೆ ದೇವರ ಅಕ್ಕಯ್ಯ  "ತವರಿಗೆ"

ಆರತಿ ಮಾಡುವರಿಲ್ಲ ಕಳಸ ಹಿಡಿಯುವರಿಲ್ಲ ಅಕ್ಕ

ಹೊತ್ತುಕೊಂಡು ಹೊಗುವರಿಲ್ಲ ಊರಮುಂದಕ್ಕ

ಕರುಳ ಗೆಳತಿ ನೀ ಮರೆಯದೆ ಬಾರಕ್ಕ ಊರ ಜಾತ್ರೆ ಕಾಣಕ್ಕ "ತವರಿಗೆ"

-ಕೃಷ್ಣಮೊರ್ತಿ ಅಜ್ಜಹಳ್ಳಿ ಬಿ ಎಂ ಎಸ್ ಸಿ ಇ