ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಮೂರನೇ ಕಂತು)
ಎರಡನೆಯ ಕಂತು ಇಲ್ಲಿದೆ:
http://sampada.net/blog/shivaramshastri/30/01/2010/23799
(ದಯವಿಟ್ಟು ಬರಹದಲ್ಲಿರಬಹುದಾದ ತಪ್ಪುಗಳನ್ನು ತಿದ್ದಿರಿ; ಪ್ರತಿಕ್ರಿಯೆಗಳಿಂದ ಪ್ರೋತ್ಸಾಹಿಸಿ.)
ಸಂಸ್ಥೆಯ ರಚನಾ ಕ್ರಮ ಇಂತಿದೆ:
ಸಂಸ್ಥಾ ಮಂಡಳಿಯು (Institute body) ಸರ್ವೋಚ್ಚವಾಗಿದ್ದು ಅದರ ಕೆಳಗೆ Governing body ಅಥವಾ ಆಡಳಿತ ಮಂಡಳಿ ಇದೆ.
ಆಡಳಿತ ಮಂಡಳಿಯು ವಿತ್ತ ಸಮಿತಿ, ಆಯ್ಕೆ ಸಮಿತಿ, ಶಿಕ್ಷಣ (Academic) ಸಮಿತಿ, ಆಸ್ತಿಪಾಸ್ತಿ (Estate) ಸಮಿತಿ, ಆಸ್ಪತ್ರೆ ವ್ಯವಹಾರ ಸಮಿತಿ ಇವುಗಳನ್ನು ಒಳಗೊಂಡಿದೆ.
ನನಗೆ ಲಭ್ಯವಿರುವ ಮಾಹಿತಿ ಪ್ರಕಾರ:
೬೨೦ ಅಧ್ಯಾಪಕರುಗಳನ್ನು ನೇಮಕಾತಿ ಮಾಡಿಕೊಳ್ಳಲು ಅನುಮತಿಯಿದ್ದು ಸದ್ಯಕ್ಕೆ ೪೫೩ ಅಧ್ಯಾಪಕರು ಮಾತ್ರ ಇದಾರೆ.
ಸುಮಾರು 50 ಶೈಕ್ಷಣಿಕ ವಿಭಾಗಗಳಿವೆ. ೪೭ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ನೀಡಲಾಗುತ್ತಿದೆ.
೨೦೦೭-೨೦೦೮ರ ನಡುವೆ
೧) ಸುಮಾರು ೬೪೦ ಪದವಿ ಪೂರ್ವ ವಿದ್ಯಾರ್ಥಿಗಳೂ, ೧೦೨೧ ಸ್ನಾತಕೋತ್ತರ ವಿದ್ಯಾರ್ಥಿಗಳೂ ಇದ್ದರು.
೨) ಸಂಸ್ಥೆಯಿಂದ ೧೪೨೪ ಬರಹಗಳು ವಿವಿಧ ನಿಯತಕಾಲಿಕ (journal) ಗಳಲ್ಲಿ ಪ್ರಕಟವಾಗಿವೆ.
೩) ಒಟ್ಟೂ ೧೫,೨೮,೨೩೮ ಹೊರರೋಗಿಗಳನ್ನು, ೮೩,೮೫೨ ಒಳರೋಗಿಗಳನ್ನು ಆರೈಕೆ ಮಾಡಲಾಗಿದೆ; ೭೭, ೮೫೨ ಶಸ್ತ್ರ ಚಿಕಿತ್ಸೆಗಳನ್ನು ನಡೆಸಲಾಗಿದೆ. ಅವುಗಳಲ್ಲಿ ೩೧,೮೬೯ ಹೃದಯ (ಸಂಬಂಧಿತ) ಶಸ್ತ್ರಚಿಕಿತ್ಸೆ, ೩೨,೧೯೨ ಮಿದುಳಿನ (ಸಂಬಂಧಿತ) ಶಸ್ತ್ರಚಿಕಿತ್ಸೆ ಹಾಗೂ ೩೯೨೭ ಕಾನ್ಸರ್ (ಸಂಬಂಧಿತ) ಶಸ್ತ್ರಚಿಕಿತ್ಸೆ ಸೇರಿವೆ.
೪) ಸುಮಾರು ೨.೭% ರಷ್ಟು ರೋಗಿಗಳು ಸಾವನ್ನಪ್ಪಿದ್ದಾರೆ.
೫) ೪೫ MBBS ಸ್ಥಳ(ಸೀಟು)ಗಳಿಗೆ ಒಟ್ಟೂ ೭೧೭೫೭ ಅರ್ಜಿಗಳು ಬಂದಿದ್ದವು.
(ಮುಂದುವರಿಯುವುದು)