ಅಗೋ ಅಲ್ಲಿದೆ ನೋಡಿ ಮುರುಡೇಶ್ವರ ದೇವಸ್ಥಾನ !
ಇದು ವಿಶೇಷವಾದ ಫೋಟೋಗಳಲ್ಲೊಂದು ಎಂದು ಹೇಳುತ್ತಿರುವುದು ಏತಕ್ಕೆ ಅಂದರೆ, ಮೊನ್ನೆ ನಾವು ಟ್ರಿವೆಂಡ್ರಮ್ ನಿಂದ ಮುಂಬೈಗೆ 'ರಾಜಧಾನಿ ಎಕ್ಸ್ ಪ್ರೆಸ್' ನಲ್ಲಿ ಪ್ರಯಾಣಿಸುತ್ತಿದ್ದೆವು. ಆಗ ದಾರಿಯಲ್ಲಿ 'ಮುರುಡೇಶ್ವರದ ಡೇವಾಲಯದ ರಾಜ ಗೋಪುರ' ಸ್ಪಸ್ಟವಾಗಿ ಕಾಣಿಸಿತು. ಯಾವಾಗಲೂ ನನ್ನ ಹತ್ತಿರ ಕ್ಯಾಮರಾ ಸಿದ್ಧವಾಗಿರುವುದರಿಂದ ಕಿಟಕಿಯಲ್ಲೇ ಫೋಕಸ್ ಮಾಡಿ ಈ ಸುಂದರ ಚಿತ್ರ ತೆಗೆದುಕೊಂಡೆ ಈಗ ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನೀವು ಸಹಿತ ಕೊಂಕಣ ರೈಲಿನಲ್ಲಿ ಪ್ರಯಾಣಿಸುವಾಗ ಇಂತಹ ಅಪರೂಪದ ಚಿತ್ರಗಳನ್ನು ತೆಗೆಯಬಹುದು. ಹಾ ! ಆದರೆ ಇಂತಹ ಚಿತ್ರ ತೆಗೆಯಲು ಕಾಯುತ್ತಿರಬೇಕಾಗುತ್ತೆ. ಅಲ್ಲಿನ ಗಾರ್ಡ್ ಇಲ್ಲವೇ ಬೇರೆ ಸಿಬ್ಬಂದಿಗಳ ಸಹಕಾರದ ಆವಶ್ಯಕತೆಯೂ ಇದೆ ಎನ್ನುವಮಾತು ನೀವು ಈ ತರಹದ ಪ್ರಯತ್ನಮಾಡಿದಾಗಲೇ ಗೊತ್ತಾಗೋದು. ಗುಡ್ ಲಕ್ !
Comments
ಬಹುಶಃ ಈಗ ಕಾಣಿಸಬಹುದಲ್ಲವೇ ಸರ್ ?