ಅಚ್ಚಗನ್ನಡದ ಫಲಕ

ಅಚ್ಚಗನ್ನಡದ ಫಲಕ

ಬರಹ

ಮದುವೆ ಮಂಟಪಗಳ ಸಂಖ್ಯೆ ಹೆಚ್ಚಿದಷ್ಟೂ ಗೊಂದಲ ಉಂಟಾಗುವುದು ಸಹಜ. ಮದುವೆಗೆ ಬಂದವರು ತಪ್ಪಾಗಿ ಬೇರೊಂದು ಛತ್ರದೊಳಕ್ಕೆ ಹೋಗುತ್ತಾರೆಂದರೆ ಈ ಗೊಂದಲವೇ ಕಾರಣ. ಅದಕ್ಕೇ ಈಗೀಗ ಮದುವೆ ಮಂಟಪದ ಮುಂದೆಯೇ ದೊಡ್ಡದಾಗಿ ವಧು ವರರ ಹೆಸರನ್ನು ಪ್ರದರ್ಶಿಸಿರುತ್ತಾರೆ. ಬಣ್ಣದ ದೀಪಗಳಿಂದ ಹಿಡಿದು ಹೂಗಳ ಅಲಂಕಾರದವರೆಗೆ ಈ ಹೆಸರುಗಳು ಬಹು ಸುಂದರವಾಗಿ ರಾರಾಜಿಸುತ್ತವೆ. ರಾಜ ವೆಡ್ಸ್ ರಾಣಿ ಅಥವಾ ರಾಜ ವಿತ್ ರಾಣಿ ಎಂದೇ ಇಂಗ್ಲಿಷ್‌ನಲ್ಲಿ ಮಿಂಚುವ ಈ ಪದಗಳು ಕನ್ನಡದಲ್ಲಿ ಏಕಿರಬಾರದು? ಬೆಂಗಳೂರಿನಲ್ಲಿ ಎಲ್ಲವೂ ಇಂಗ್ಲಿಷ್‌ಮಯವೇ. ಆದರೆ ಬೆಂಗಳೂರಿನ ಹೊರಗೆ ಬನ್ನಿ. ಭಾಸ್ಕರ ಜೋಡಿ ಅನಿತಾ, ಉಮೇಶ ಸಂಗಾತಿ ದಿವ್ಯಾ, ರಾಜ ಅರ್ಧಾಂಗಿ ಲಕ್ಷ್ಮಿ, ಬಸಯ್ಯ ಮತ್ತು ಶಿವಮ್ಮ ಮುಂತಾದ ಅಚ್ಚಗನ್ನಡದ ಫಲಕಗಳನ್ನು ಕಾಣಬಹುದು. ಇವು ನಗರದ ಛಾಪಿನೊಂದಿಗೆ ಕನ್ನಡದ ಸೊಗಡನ್ನು ತುಂಬಿಕೊಂಡು ಅವಳ ಉಡುಪು ಇವಳಿಗೆ ತೊಡಿಸಿ ಚಂದ ಕಂಡಂತೆ ಅಲ್ಲವೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet