ಅಚ್ಚರಿ!
ಕವನ
ಪೆನ್ನಿದೆ ಪೇಪರಿದೆ
ಎರಡನ್ನೂ ಕೊಳ್ಳುವಷ್ಟು ಹಣವಿದೆ
ಈ ಭಾವನೆಗಳೇಕೆ ಪೆನ್ನಿನ ಮೂಲಕ
ಪೇಪರಿಗಿಳಿಯುವುದೇ ಇಲ್ಲ...?
ಅನ್ನವಿದೆ,ನೀರಿದೆ...
ಎರಡೂ ಕೊಳ್ಳುವಷ್ಟು ಹಣವಿದೆ...
ಯಾಕೆ ಅನ್ನ ನೀರಿಗಷ್ಟೇ
ನಾನು ತೃಪ್ತನಲ್ಲ...?
ಸ್ನೇಹವಿದೆ ಸಂಬಂಧವಿದೆ..
ಇಲ್ಲದಿದ್ದರೂ ಗಳಿಸುವಷ್ಟು ತಾಕತ್ತು ಹಣಕ್ಕಿದೆ...
ಆದರೂ ಬದುಕು ನೀರಸ!
ಇದೇಕೆ ಹೀಗೆ...?
ಹಣವನ್ನೂ ಮೀರಿದುದು
ಬದುಕಿನಲ್ಲಿ ಏನೋ ಇದೆ...
ಅರಿವಿದ್ದರೂ ಅರ್ಥೈಸಿಕೊಳ್ಳದ
ಮಾನವನ ಆಲೋಚನೆ ಬದಲಾಗಬೇಕಿದೆ...
-ನಿಶ್ಮಿತಾ ಪಳ್ಳಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್