ಅಡಕಮುದ್ರಿಕೆ(ಆಡಿಯೋ ಸಿ.ಡಿ) ಬೆಳಕು ಬಂದಿದೆ ಬಾಗಿಲಿಗೆ
ಕನ್ನಡ ಬಂಧುಗಳೇ ನನ್ನ ಮೊದಲ ಅಡಕಮುದ್ರಿಕೆ/ ಆಡಿಯೋ ಸಿ.ಡಿಯನ್ನು ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಪುತ್ತೂರು ನರಸಿಂಹ ನಾಯಕ ಸಂಗೀತ ಸಂಯೋಜಿಸಿ ಹಾಡಿರುವ "ಬೆಳಕು ಬಂದಿದೆ ಬಾಗಿಲಿಗೆ" ಯನ್ನ ದಿನಾಂಕ ೨೫ ಡಿಸೆಂಬರ್ ೨೦೧೭ ರಂದು ಭಾರತೀಯ ವಿದ್ಯಾಭವನದಲ್ಲಿ ಲೋಕಾರ್ಪಣೆ ಮಾಡಲಾಯಿತು. ,ಈ ಸಂದರ್ಭದಲ್ಲಿ ಭಾಗವಹಿಸಿ ಎಲ್ಲಾ ಅಥಿತಗಳಿಗೂ ಅಧ್ಯಕ್ಷರಿಗೂ ಹಾಗೂ ಎಲ್ಲಾ ಕನ್ನಡ ಅಭಿಮಾನಿಗಳಿಗೂ ತುಂಬು ಹೃದಯದ ಧನ್ಯವಾದಗಳು.
ಇದರಲ್ಲಿ ೯ಹಾಡುಗಳಿದ್ದು, ಎಲ್ಲಾ ಕವನಗಳನ್ನು ನನ್ನ "ಜೀವನ ತರಂಗಗಳು " ಹಾಗೂ "ಮಂಥನ"ದಿಂದ ಆರಿಸಿ ಕೊಳ್ಳಲಾಗಿದೆ.ಎಲ್ಲಾ ಕವನಗಳು ಅದ್ಬುತವಾಗಿ ಮೂಡಿಬಂದಿವೆ. ಇವುಗಳನ್ನು ಪುತ್ತೂರು ನರಸಿಂಹ ನಾಯಕ್ ,ಶ್ರೀಮತಿ ಸುರೇಖ ಹಾಗು ಶ್ರೀಮತಿ ನಾಗಚಂದ್ರಿಕಾ ಸುಶ್ರಾವ್ಯವಾಗಿ ಹಾಡಿದ್ದಾರೆ.