ಅಡ್ಡಮತದಾನ ಇದನ್ನೆಲ್ಲಾ ಸೂಚಿಸುತ್ತದೆ!

ಅಡ್ಡಮತದಾನ ಇದನ್ನೆಲ್ಲಾ ಸೂಚಿಸುತ್ತದೆ!

ಬರಹ

  ನಮ್ಮ ಸಂವಿಧಾನ ಮತ್ತು ಚುನಾವಣಾ ಕಾಯ್ದೆ-ಕಾನೂನುಗಳು ಇಪ್ಪತ್ತನೇ ಶತಮಾನದ ಮೊದಲರ್ಧದಲ್ಲಿ ರಚಿತವಾದವು. ಮನುಷ್ಯತ್ವದ ಮೌಲ್ಯದಲ್ಲಿ ಅಚಲ ನಂಬಿಕೆಯುಳ್ಳವರು ಅದನ್ನು ರಚಿಸಿದ್ದರು. ಮುಂದಿನ ಮುಕ್ಕಾಲು ಶತಕದಲ್ಲಿ, ಮನುಷ್ಯತ್ವಕ್ಕೆ ಮೀರಿದ ರಾಜಕೀಯ ಪ್ರಾಣಿವರ್ಗವೊಂದು ಹುಟ್ಟಿಕೊಳ್ಳುತ್ತದೆಂಬ ಮುಂದಾಲೋಚನೆಯೂ ಅವರಿಗೆ ಇದ್ದಿರಲಾರದು!
 ಈಗ ಇಪ್ಪತ್ತು-ಇಪ್ಪತ್ತೈದು ವರ್ಷಗಳ ಹಿಂದೆ, ಕುಖ್ಯಾತ ದಾದಾಗಳ ಹೆಸರು ಕೇಳಿ ನಡಗುತ್ತಿದ್ದೆವು. ನೋಡತ್ತಿದ್ದಂತೆಯೇ ಅವರದೇ ಮೊಟ್ಟೆ-ಮರಿಗಳು ಅವರವರನ್ನೇ ಮುಗಿಸಿ ತಾವು ಮೆರೆಯುವ ಅಟ್ಟಹಾಸ ಆರಂಭವಾಯಿತು. ಇಂಥದು ಅಯಾ ಗಲ್ಲಿ-ಗಡಿಗಳಿಗಷ್ಟೇ ಸೀಮಿತವಾಗಿದ್ದಿದ್ದಿರವರೆಗೆ ಬಹುಸಂಖ್ಯೆಯ ಸಮಾಜಿಕರಿಗೆ ಅಷ್ಟಾಗಿ ಸಂಬಂಧವಿರಲಿಲ್ಲ.
 ಆದರೀಗ ಇದೇ ಒಡಕು-ಛಿದ್ರಗಳಿಗೆ ರಾಜಕಾರಣ ಎಂಬ ಮರ್ಯಾದೆಯ ಹೆಸರು ಬಂದಿದೆ. ಒಬ್ಬ ದಾದಾನ ಹೆಸರಿನಿಂದ ಕುಖ್ಯಾತವಾಗಿರುತ್ತಿದ್ದ ತಂಡಗಳು, ದೊಡ್ಡ-ದೊಡ್ಡ ಧ್ಯೇಯಗಳನ್ನು ಧ್ವನಿಸುತ್ತವೊ ಎಂಬಂತೆ ಮಾನ್ಯತೆ ಪಡೆದ ಪ್ರಾದೇಶಿಕ ಪಕ್ಷಗಳೇ ಆಗುತ್ತಿವೆ; ದೊಡ್ಡ ಹೆಸರಿನ ರಾಷ್ಟ್ರೀಯ ಪಕ್ಷಗಳನ್ನು ’ಬ್ಲ್ಯಾಮೇಲ್’ ಮಾಡುತ್ತಾ ಆಯಾ ಪಕ್ಷಗಳ ಶಾಸಕ-ಸಂಸದರೇ ಅವನ್ನು "ಕ್ಯಾರೆ" ಎನ್ನಲಾರದಂತೆ ಮಾಡುತ್ತಿವೆ! ಈ ಸದಸ್ಯರುಗಳು ನಮ್ಮ, ಅಂದರೆ, ಸಾರ್ವಜನಿಕರ ಪ್ರತಿನಿಧಿಗಳು ಎನ್ನುವ ಪಟ್ಟವನ್ನೂ ಪಡೆಯುತ್ತಾರೆ! ಮೆಣಸರೆಯಲು ಅವರು ನಮ್ಮಂಥ "ಚಿಕನ್"ಗಳನ್ನೇನೂ ಕೇಳುವುದಿಲ್ಲ!
ಪರಿಹಾರ ಬೇಕೇ? ಇದಕ್ಕೆ ಇದಕ್ಕೆ ಒಂದೇ ಮಾರ್ಗ, ನಿಜವಾದ ಬಹುಜನ ಪ್ರತಿನಿಧಿಗಳಷ್ಟೇ ಶಾಸಕರೂ-ಸಂಸದರೂ ಆಗುವಂತೆ ಚುನಾವಣಾ ವ್ಯವಸ್ಥೆಗೆ ವಿವೇಕ ತರಬೇಕು; ಇಲ್ಲದಿದ್ದರೆ ದೇಶವು ವಿದೇಶೀ, ಖಾಸಗಿ ಬಂಡವಾಳಶಾಹಿಗಳ ಗುಲಾಮಗಿರಿಗೆ ಸನ್ನದ್ಧವಾಬೇಕಾಗುತ್ತದೆ!.   

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet