ಅಡ್ಡಾದಿಡ್ಡಿ ಓಡಾಡೋ ಗಾಡಿ !
ಗಾಡಿಯಲ್ಲಿ ಹೋಗುವಾಗ ಮತ್ತೊಂದು ಗಾಡಿಯೊಂದರ ಬಾಡಿ
ಅಡ್ಡಾದಿಡ್ಡಿ ಓಡುತ್ತಿದ್ದರೆ, ಕುಡಿದೋಡುತಿದೆ ಅಂತಲ್ಲ ಆ ಗಾಡಿ
ಆ ಗಾಡಿಯ ಲೇಡಿ ತನ್ನ ಲಿಪ್’ಗೆ ಲಿಪ್ ಸ್ಟಿಕ್ ಬಳಿದುಕೊಳ್ಳುತ್ತಿರಬಹುದು
ಬಳಿದುಕೊಂಡ್ ಮೇಲೆ (ತನ್ನ) ತುಟಿಗಳನ್ನು ಬೆಸೆದುಕೊಳ್ಳುತ್ತಿರಬಹುದು
ಬೆಸೆದುಕೊಳ್ಳುತ್ತ ಕಿರುಗನ್ನಡಿಯಲ್ಲಿ ನೋಡಿಕೊಳ್ಳುತ್ತಲೂ ಇರಬಹುದು
ಆ ಗಾಡಿಯ ಲೇಡಿ ಐ-ಲೈನೆರ್’ಅನ್ನು ತೀಡಿಕೊಳ್ಳುತ್ತಿರಬಹುದು
ತೀಡಿಕೊಂಡು ನ್ಯಾಪ್ಕಿನ್’ನಿಂದ ನವಿರಾಗಿ ಒರೆಸಿಕೊಳ್ಳುತ್ತಿರಬಹುದು
ಒರೆಸಿಕೊಳ್ಳುತ್ತ ಕಿರುಗನ್ನಡಿಯಲ್ಲಿ ನೋಡಿಕೊಳ್ಳುತ್ತಲೂ ಇರಬಹುದು
ಚಾಲಕ ಒಂದು ಕೈಯಲ್ಲಿ ಸ್ಟೀರಿಂಗ್, ಮತ್ತೊಂದರಲ್ಲಿ ಮೊಬೈಲ್’ನ ನಂಬರ್ ಒತ್ತುತ್ತಿರಬಹುದು
ತಲೆಗೂ ಕಿವಿಗೂ ಮಧ್ಯೆ ಮೊಬೈಲ್ ಸಿಕ್ಕಿಸಿ ಪೀಸಾ ಟವರ್’ನಂತೆ ತಲೆವಾಲಿಸಿರಬಹುದು
ವಾಲಿಸಿದ ತಲೆಯಿಂದ ಎದುರಿಗೆ ನೋಡುವುದ ಬಿಟ್ಟು ಸಂಭಾಷಣೆಯಲ್ಲಿ ಬಿಜಿ ಇರಬಹುದು
ಎರಡು ಅಂಗೈಯಲ್ಲಿ ಮೊಬೈಲ್ ಪಿಡಿದು, ಮೊಣಕೈಗೆ ಸ್ಟೀರಿಂಗ್ ಕೊಟ್ಟಿರಬಹುದು
ದೇವರಿಗೂ, ಹಿರಿಯರಿಗೂ ಬಾಗದ ತಲೆಯನ್ನು ಮೊಬೈಲ್ ಮುಂದೆ ಬಾಗಿಸಿರಬಹುದು
ಬಾಗಿದ ತಲೆಯಿಂದ ಮುಖ್ಯವಾದ ಎಸ್.ಎಮ್.ಎಸ್ ಮೆಸೇಜ್ ಕಳುಹಿಸುತ್ತಿರಬಹುದು
ಪಕ್ಕದ ಸೀಟಿನಲ್ಲಿ ಕುಳಿತ ಸುಂದರಿಯ ಮಾತುಗಳನ್ನು ಆಲಿಸುತ್ತಿರಬಹುದು
ಇನ್ಯಾವುದೋ ಕಾರಿನ ಸುಂದರಿಯನ್ನು ಜೊಲ್ ಸುರಿಸಿಕೊಂಡು ನೋಡುತ್ತಿರಬಹುದು
ಗೆಳತಿಯ ಕೆನ್ನೆಯ ಮೇಲೆ ಹರಿದಾಡುತ್ತಿರೋ ಕೂದಲನ್ನು ನವಿರಾಗಿ ತಳ್ಳುತ್ತಿರಬಹುದು
ತೂಕಡಿಕೆಯನ್ನು ತಡೆಯಲು MP3’ಯಲ್ಲಿ ಬೇರೆ CD ಹಾಕುತ್ತಿರಬಹುದು
Starbucks’ನಲ್ಲಿ ಕೊಂಡ ಬಿಸಿ ಬಿಸಿ ಕಾಫಿ ಬಸಿದುಕೊಳ್ಳುತ್ತಿರಬಹುದು
McDonalds’ನಲ್ಲಿ ಕೊಂಡ ದೊಡ್ಡ ಸೈಜಿನ ಬರ್ಗರ್ ಮುಕ್ಕುತ್ತಿರಬಹುದು
ಹಿಂಬದಿಯ ಸೀಟಿನಲ್ಲಿ ಕುಳಿತ ತನ್ನ ಮಕ್ಕಳಿಗೆ ಶಿಸ್ತಿನ ಪಾಠ ಮಾಡುತ್ತಿರಬಹುದು
ಮೀಟಿಂಗ್ ನೆವ ಹೇಳಿ ಸಿನಿಮಾ ಕ್ಯಾನ್ಸಲ್ ಎಂದು ಕರೆ ಮಾಡಿದವಗೆ ಬೈಯುತ್ತಿರಬಹುದು
ಬ್ರೇಕ್-ಅಪ್ ಮಾಡುತ್ತಿದ್ದೇನೆ ಎಂದು ಈಕೆಗೆ ಕರೆ ಮಾಡಿದ್ದು ತಲೆ ಕೆಟ್ಟಂತಾಗಿರಬಹುದು
ಗಾಡಿಯಲ್ಲಿ ಹೋಗುವಾಗ, ನಮ್ಮ ಕಣ್ಣಿಗೆ ಮತ್ತೆಲ್ಲ ಗಾಡಿಗಳ ಬಾಡಿ
ಅಡ್ಡಾದಿಡ್ಡಿ ಓಡುತ್ತಿದ್ದರೆ, ಕುಡಿದಿರಬಹುದೇನೋ ನಮ್ದೇ ಬಾಡಿ!!
ಸತ್ಯ ಹೇಳೋದಾದರೆ:
ಸೊಟ್ಟಗೆ ಓಡಾಡೊ ನಾಲ್ಕು ಚಕ್ರದ ಗಾಡಿಗೇ ಇಷ್ಟೆಲ್ಲ ಇರಬಹುದು’ ಕಾರಣಗಳು ಎಂದಾದರೆ
ಮೂರು ದಿನದ ಬಾಳಿನ ನಮ್ಮೀ ಬಾಡಿ ಸೊಟ್ಟಾಗಾಗಲು ಇನ್ನೆಷ್ಟು ಕಾರಣ ಇರಬಹುದೋ, ಸಿವನೇ?
Comments
ಉ: ಅಡ್ಡಾದಿಡ್ಡಿ ಓಡಾಡೋ ಗಾಡಿ !
ಅಡ್ಡಾದಿಡ್ಡಿ ಗಾಡಿ ಮತ್ತು ಈ ಬಾಳಿನ ಸುಂದರ ಹೋಲಿಕೆ! ಧನ್ಯವಾದಗಳು, ಭಲ್ಲೆಯವರೇ.
In reply to ಉ: ಅಡ್ಡಾದಿಡ್ಡಿ ಓಡಾಡೋ ಗಾಡಿ ! by kavinagaraj
ಉ: ಅಡ್ಡಾದಿಡ್ಡಿ ಓಡಾಡೋ ಗಾಡಿ !
ಧನ್ಯವಾದಗಳು ಕವಿಗಳೇ .... ನೆನ್ನೆ ಗಾಡಿಯೊಂದು ಸ್ವಲ್ಪ ಸೊಟ್ಟ ಓಡ್ತಿತ್ತು. ಆಗ ಮನಕ್ಕೆ ಬಂದ ಸಾಲುಗಳು ಇವು :-)