ಅತಿಯಾದರೆ ಅಮೃತವೂ ವಿಷ
ಕವನ
ಹಿತವು ಎನಿಸಿವುದೇನೆ ಇದ್ದರು
ಮಿತಿಯಲಿದ್ದರೆ ಬಲು ಹಿತ
ಅತಿಯ ಬಳಕೆಯು ವಿಷವದೆಂದರು
ಮಿತಿಯ ಮೀರಲು ಅಮೃತ
ನಯನವೆಂಬುದು ಮುಖ್ಯವಾದುದು
ಜಗದಿ ಜೀವಿಪ ಜೀವಿಗೆ
ಕಣ್ಣು ಸಾಸಿರ ಹೊತ್ತು ಮೈಯಲಿ
ಹಿತವು ಎನಿಸಿತೆ ಸುರಪಗೆ?
ಜಲವ ಬಯಸುವ ಜೀವಸಂಕುಲ
ಬದುಕಿ ಬಾಳಲು ಜಗದಲಿ
ಎಲ್ಲ ಮುಳುಗಿಪ ನೆರೆಯು ಬಂದರೆ
ಬದುಕಲೆಲ್ಲಿಗೆ ಹೋಗಲಿ?
ಹಚ್ಚಿ ಬೆಳಗುವ ಹಣತೆ ಬೆಳಕಲಿ
ಇರುಳ ಕತ್ತಲೆ ಸರಿವುದು
ಬೆಂಕಿ ಹತ್ತಲು ಮನೆಯ ಸೂರಿಗೆ
ಕಿಚ್ಚು ಏನನು ಉಳಿಸದು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್