ಅತ್ತೆ ಸೊಸೆ in Boxing Ring - Part 2
Part 1
http://sampada.net/article/25625
Continued ...........
"ಹೆಂಡತಿ ಅನ್ನುವುದು ಒಂದು ಮಾಯೆ , ಈ ಮಾಯೆಯ ಛಾಯೆ ಯಾವ ಗಂಡಿನ ಮೇಲೆ ಬಿಳೊತ್ತೋ,
ಸದಾಕಾಲ ಅದರ ಆಧಿನದಲ್ಲಿ ಇರ್ತಾನೆ" , ಇದು ದೊಡ್ಡವರ ಮಾತು.
ಏನೇ ಇರ್ಲಿ ಈಗ ಮ್ಯಾಚ್ first half ಆಯಿತು ಅಂತ ತಿಳ್ಕೊಳೋಣ.
ಬರೋ ಸೋಸೇರು ಒಂದೇ ತರಹ ಇರೋಲ್ಲ. ಕೆಲ್ವುರುಗೆ ಅವರ ಅಕ್ಕಂದಿರು ಅವರ stadium ದು Pitch report ಕೊಟ್ಟಿರ್ತಾರೆ. ಇನ್ನುಕೆಲುವ್ಸಲಿ ಹುಡುಗ 2 ರಡನೆ ಮಗ ಆಗಿದ್ರೆ ,for the sake of his safety ಅವ್ನೆ ರಿಪೋರ್ಟ್ ಕೊಟ್ಟಿರ್ತಾನೆ. ಸೊಸೆ firstu hit ಮಾಡ್ತಾಳೋ defense ಆಡ್ತಾರೋ ಅದು situation ಮೇಲೆ ನಿರ್ಧಾರ ಅಗೊತ್ತೆ .
ಎಲ್ಲಾ ಗಂಡು ಮಕ್ಕಳು ಅವರವರ ಅಮ್ಮಂದಿರನ್ನ 'ಪಂಢರಿಬಾಯಿ' ಅಂತ ಅನುಕೊಂಡಿರ್ತಾರೆ, ನಿಮ್ಮ ಅಮ್ಮ 'ರಮಾದೇವಿ' ಅಂತ prove ಮಾಡೋ ಕೆಲ್ಸನ ಸೋಸೇರು ಮಾಡ್ತಾರೆ.ಜೀವನ ದಲ್ಲಿ ಯಾರೂ ಕೂಡ 'ನಿಮ್ಮ ಅಮ್ಮ ಹೀಗಿಲ್ಲ, ಹಾಗಿಲ್ಲ' ಅಂತ ಹೇಳಿರೋದು ಕೇಳೆಇಲ್ಲದಿರೋ ಗಂಡು ಮಕ್ಕಳು
ತನ್ನ, ಹೆಂಡತಿ ಹೇಳ್ತಾ ಇರೋದನ್ನ ಕೇಳಬೇಕಾಗೊತ್ತೆ . ಅದೇ ಸಮಯಕ್ಕೆ ಸರಿಯಾಗಿ ಅಮ್ಮಂದಿರು ಏನೋ ಎಡವಟ್ಟು ಮಾಡ್ಕೊತಾರೆ.
ಜಗಳದ ಜನ್ಮ ಸ್ಥಾನ ಅಗ್ನಿಮೂಲೇಯಾದ ಅಡುಗೆಮನೆ , ಅಲ್ಲಿಂದಾನೆ ಬೆಂಕಿಬೇಳೋದು.
ಅತ್ತೆ ಕಾಫಿ ಮಾಡಿದ್ರೆ "ಪ್ಲೀಸ್ ಇವರಿಗೆ ಕೊಡಬೇಡಿ ಬೆಳಗಿನಿಂದ 2 ಸಲಿ ಆಗಿದೆ" , ಅಂತ ಗಂಡನ ಬದಲು ಇವರೇ ಹೇಳ್ತಾರೆ
party spokesperson ತರಹ . ತಮ್ಮ ಗಂಡನ ಎಲ್ಲಾ ವಿಚರಗಳು ಗೊತ್ತು ಅಂತ ತೋರ್ಸ್ಕೊತಾರೆ, sometimes ಅತ್ತೆ ಮಾಡೋ ತಿಂಡಿಗಿಂತ ತಮ್ಮ latest 'ಹೊಸರುಚಿ' ಚನ್ನಾಗಿದೆ ಅಂತ ಹೇಳ್ತಾರೆ.
ಇನ್ನು ಕೆಲವರು 'ಸುಮ್ನೆ ಏಕೆ medicine ಗೆ ಕಾಸು ಖರ್ಚು ಮಾಡ್ತೀರಿ , tell your mom to do ಕಪಾಲಭಾತಿ ' ಅಂತ ಪುಕ್ಸಟ್ಟೆ
ಸಲಹೆ ಕೊಡವರು ಇದ್ದಾರೆ .
ರಾತ್ರೆ bedtime stories ಶುರುವಗೊತ್ತೆ ," ನಿಮಪ್ಪ ಎಲ್ಲ switch on ಮಾಡಿ off ಮಾಡೋದೇ ಮರಿತಾರೆ, ನಿಮ್ ಹೆಸರಲ್ಲಿ ಬಂದಿರೋ ಪೋಸ್ಟ್ನ ನಿಮ್ಮ ಅಮ್ಮ ಚೆಕ್ ಮಾಡ್ತಾರೆ" ಹಿಗೆ ತುಂಬಾ complaints ಹೇಳ್ತಾರೆ.
ಗಂಡ ಅನ್ನೋ ವಸ್ತು ಅವರಿಗೋಸ್ಕರ ಅಂತ ತಿಳಿದುಕೊಂಡಿರುತ್ತಾರೆ.
ಅಪ್ಪ ಅಮ್ಮನಿಗೆ ಮಗನ salary ಎಷ್ಟು ಅನ್ನೋದ್ದು ಮದುವೆಗೆ ಮುಂಚೆ ಮಾತ್ರ ಗೊತ್ತಿರೊತ್ತೆ ,ಆಮೇಲೆ ಗೊತ್ತಾಗೊಲ್ಲ.
ಸೋಸೇರು "ನಾವು " ಅಂದ್ರೆ ತಾನು ತನ್ನ 'ಪಶು'ಪತಿ ಅಂತ ಅನ್ನಕೊಂಡು ಬಿಡ್ತಾರೆ ಮನೇಲಿ ಒಂದು ಸಾವಿರ ಜನ ಇದ್ರು , ಅವರನ್ನ ತನ್ನವುರು ಅಂತ ಅನ್ಕೊಳಲ್ಲ .
ಒಟ್ಟಿನಲ್ಲಿ ಅತ್ತೆ ಮತ್ತು ಸೊಸೆ ಇಬ್ರು ಕೆಟ್ಟವರು ಅಲ್ಲ, ಅವರವರ roles ಅಂಡ್ responsibilities ನ ಸರಿಯಾಗಿ ಅರ್ಥ ಮಾಡ್ಕೊಂದಿರೋದಿಲ್ಲ.
ಇದಕ್ಕೆಲ್ಲ ಒಂದೇ ಪರಿಹಾರ, 'ವಿಶಾಲ ಮನೋಭಾವ' ಅನ್ನೋದು ಇರ್ಬೇಕು .
ಇದು ಇದ್ರೆ Boxing ರಿಂಗ್ square ಅಗೊತ್ತೆ . ಯಾರೇ ಆಗಲಿ ಅವರವರ ಚೌಕಟ್ಟಿನಲ್ಲಿ ಇದ್ರೆ ಏನು ತೊಂದರೆ ಇರೋದಿಲ್ಲ.
ಮದುವೆ ಆಗೋ ಹುಡುಗರೇ !! ಒಂದು ತಮಾಷೆಯ ಕಿವಿಮಾತು , ಮದುವೆ ಆದ ಮೇಲೆ, ನೀವು honey moonge
ಹೋಗೋ ಬದ್ಲು ನಿಮ್ಮಪ್ಪಾಮ್ಮನ್ನ ಯಾತ್ರೆ ಕಳ್ಸಿ. ಮನೆಗೆ ಚುಚ್ಕೊಡೋ ಯಾವ ಕಾಗೆ ಗೂಬೆಗಳು ಬರದಂತೆ ಅಗೊತ್ತೆ. :)