ಅತ್ತ್ಗೊಂದ್ ಕಾಲ ಸೊಸ್ಗೊಂದ್ ಕಾಲ ಇದ್ನ ಬ್ಯಾರೆ ಎನೋ ಏಳ್ತಾರೆ !

ಅತ್ತ್ಗೊಂದ್ ಕಾಲ ಸೊಸ್ಗೊಂದ್ ಕಾಲ ಇದ್ನ ಬ್ಯಾರೆ ಎನೋ ಏಳ್ತಾರೆ !

 

ಎವ್ವೆರಿ ಡಾಗ್ ಹ್ಯಾಸ್ ಹಿಸ್/ಹರ್ ಡೇ ಅಂತವಾ ! 
 
ಸಿದ್ರಾಮಣ್ಣಾರ್ಗೆ ಶರ್ಣು.
 
ಶಡ್ ಒಡ್ದು ಮ್ಯಾಲ್ ಮ್ಯಾಲ್ ಬರ್ತಿದಿರಿ. ಸಂತೊಸ. ಬಗಲ್ನಾಗೆ ಔನೆ ದುಸ್ಮನ್ ಅನ್ನೊ ವಾಕ್ಯ ಜ್ಯಾಪ್ಕ ಇಟ್ಕಳಿ. ೫ ವರ್ಸ ಆಳಿದ್ದು ಇತಿಆಸ್ದಾಗೆ ಎಲೄ ಮರೀಬಾರ್ದು. ಅಂಗಿರ್ಬೇಕು ಏನಂತೀರ ?
 
ಮೊನ್ನೆ ಅನಂತ್ ಮೂರ್ತಿಗಳ್ನ  ಭೆಟ್ಟಿ ಆದ್ರಿ. ಜಿ.ಎಸ್.ಎಸ್. ಕಾಲ್ಗೆ ಬಿದ್ರಿ, ಎಲ್ಲಾ ಸರಿ. ಒಂದ್ ಮಾತ್ ಮೂರ್ತಿ ಏಳಿದ್ದು ನೆಪೈತಲ್ಲ. ಇಷ್ಟ್ ದಿನ ಏನೇನೊ ಪೋಸ್ಟ್ ನಾಗಿ ಕೆಲ್ಸ ಮಾಡಿ ಬಡ್ಜೆಟ್ ಕೂಡ ಪ್ರೆಸೆಂಟ್ ಮಾಡಿದಿರಿ ಅಂದ್ರು. ಒಗಳ್ಕೆಗೆ ಬೆರಗಾಗ್ ಬ್ಯಾಡ್ರಿ. ಲಾಲು ಪ್ರಸಾದ್ ಬಡ್ಜೆಟ್ ಪ್ರೆಸೆಂಟ್ ಮಾಡ್ಲಿಲ್ವಾ ? ಪರದೇಸ್ದಲ್ಲಿ ಓಗಿ ಮಾತಾಡ್ ಬಂದ್ರಲ್ಲ ಆಮೇಲ್ ಏನಾತು. ಮಾತಾಡ್ ಮಾತಾಡ್ ಕೆಳ್ಗೆ ಬಿದ್ರಲ್ಲಪ್ಪ. ಅಂಗಾದೀತು. ಈಗ ಎಲ್ಲಾ ಮನಸ್ನಾಗೆ ವ್ಯವಾರ ತಿಳ್ಕಂಡು ಸಮಯ ಬಂದಾಗ ಝಾಡ್ಸ್ ಒಗೀರಿ. ಯಾರ್ಗೂ ಗೊತ್ತಾಗ್ದಂಗೆ. ಮುಟ್ ನೋಡ್ಕಂತಿರ್ಬೇಕು ನಿಮ್ಮ ಸತ್ರುಗಳೆಲ್ಲಾ ತಿಳೀತಲ್ಲ.
 
ಸರಿ ಬತ್ತೀನಿ ಈಗ ಮಾತಾಡ ಸಮ್ಯ ಅಲ್ಲ. ಕೆಲ್ಸ ಸುರುಮಾಡಿ. ಪ್ರತಿದಿನ ಡೈರಿ ಬರ್ದು. ಎರಡು ಮೂರುಸಲ ಓದಿ ಪ್ರೆಸ್ ಗೆ ಕೊಡಿ. 
 
ಈಗ ನಿಮ್ಮುಂದಿರೊ ಪ್ರಸ್ನೆ, ಪ್ರೆಸ್ ಮಾದ್ಯಮದೋರ್ ಅತ್ರ ಉಸಾರಾಗಿರಿ. ನೀವು ಪಸ್ ಅಂದ್ರೆ ಅವ್ರು ಕಿಸ್ ಅಂತ ಬರ್ದು ಏನಾದೃ ರಂಪ ಮಾಡಿದ್ರೋ ನಿಮ್ ಸತ್ರುಗಳಿಗೆ ಅದು ಒಟ್ಟೇಲಿ ಆಲ್ ಸುರ್ದಂಗಾಗ್ತದೆ. ’ಬ್ಯಾ’ ಆನೊ ಕುರಿಗಳ್ ಅತ್ರಾನೂ ಉಸಾರಾಗಿರಿ. ಕುರೀ ಇಂಡ್ ನಾಗೆ ನಿಮ್ ಬಾಲ್ಯ ಕಳೆದ್ರಲ್ಲಾ. ನಿಮ್ಗೇನ್ ಏಳೋದು ಬ್ಯಾಡ ಅಲ್ವ್ರಾ ? ಎಲ್ರ ಒಳ್ಳೇ ಮಾತ್ ಕೇಳಿ ನಿಮ್ದೇ ಮಾತ್ನಲ್ಲಿ ಇಸ್ವಾಸ ಇಡಿ. ಮಾತ್ನಲ್ಲಿ ಈಗ ಜೋಕ್, ಆಸ್ಯ ಅಂತಾರಲ್ಲ ಅದ್ನ ಬಿಟ್ಟೇ ಬಿಡಿ.
 
 
-ಹೊರಂಲವೆಂ

Comments

Submitted by kavinagaraj Tue, 05/14/2013 - 15:47

:))