ಅತ್ಯಮೂಲ್ಯವಾದುದು
ಅತ್ಯಮೂಲ್ಯವಾದುದು
ಅದೊಂದು ಗುರುಕುಲ, ಸಾಕಷ್ಟು ವಿಧ್ಯಾರ್ಥಿಗಳು ಅಲ್ಲಿ ಕಲಿಯುತ್ತಿದ್ದರು.
ದಿನಾಲು ಪೊಜೆ, ಜಪ, ಪ್ರಾರ್ಥನೆ, ಪಾಠ, ಪ್ರವಚನ, ಹೀಗೆ ಬಹಳವಾದ ಚಟುವಟಿಕೆಗಳು ಇವರ ದಿನಚರಿ.
ಇದರ ಆಸುಪಾಸಿನಲ್ಲೇ ಹಲವಾರು ಗುರುಕುಲಗಲು ಇದ್ದವು.
ಈ ಗುರುಕುಲದಲ್ಲಿ, ಉನ್ನತ ವ್ಯಾಸಂಗ ಮಾಡುವುದು ಒಂದು ಪ್ರತೀತಿ. ಅದರಂತೆ ಎಲ್ಲಾ ಶಿಷ್ಯರೊ ಶ್ರದ್ದೆಯಿಂದ ಕಲಿಯುತ್ತಿದ್ದರು.
ಹೀಗಿರುವಾಗ ಒಬ್ಬ ಮೇಧಾವಿ ಶಿಷ್ಯನಿಗೆ ಒಂದು ಸಂದೇಹ ಶುರುವಾಯಿತು. ಇದನ್ನು ತನ್ನ ಸಹಪಾಠಿಗಳ ಜೊತೆ ಹಂಚಿಕೊಂಡ. ಎಲ್ಲರೊ ನಾಳೆ ಪಾಠವಾದ ಮೇಲೆ ಗುರುಗಳು ವಿಶ್ರಾಂತಿ ಪಡೆಯುವ ಸಮಯದಲ್ಲಿ ಕೇಳೋಣ ಎಂದು ತೀರ್ಮಾನಿಸಿದರು.
ಮರುದಿನ ಎಂದಿನಂತೆ ಪಾಠವಾದ ಮೇಲೆ ಮೇಲೆ "ಗುರುಗಳೆ ನಮಗೂಂದು ಸಂದೇಹವಿದೆ ಬಗೆಹರಿಸಿ" ಎಂದು ವಿನಂತಿಸಿದರು.
"ಏನು ಸಂದೇಹ ಕೇಳು" ಎಂದರು ಗುರುಗಳು.
" ಈ ಪ್ರಪಂಚದಲ್ಲಿ ಅತೀ ಬೆಲೆ ಬಾಳುವಂತದ್ದು ಯಾವುದು, ಬೆಲೆಯೇ ಇಲ್ಲದ್ದು ಯಾವುದು" ಎಂದನು ಶಿಷ್ಯೋತ್ತಮ
ಗುರುಗಳು ಮುಗುಳ್ನಕ್ಕು ಇನ್ನೊಮ್ಮೆ ಹೇಳುತ್ತೇನೆ ಎಂದರು.
ಶಿಷ್ಯರಲ್ಲಿ ಸ್ವಲ್ಪಕಳವಳವಾಯಿತು. ಇದೇನು ಇಷ್ಟು ಸುಲಭದ ಪ್ರಶ್ನೆಗೆ ಉತ್ತರಿಸಲ್ಲಿಲ್ಲ ಗುರುಗಳು!?
ಮರುದಿನ ಮತ್ತದೆ ಪ್ರಶ್ನೆ, ಗುರುಗಳ ಮುಗುಳ್ನಗೆ!
ಓ ಏಕೊ ನಮ್ಮ ಗುರುಗಳಿಗೆ ಸ್ವಲ್ಪ ತಿಳುವಳಿಕೆ ಕಮ್ಮಿ ಇರಬೇಕು, ಇರಲಿ ಮತ್ತೊಮ್ಮೆ ಕೇಳೋಣ ಉತ್ತರ ಸಿಗದಿದ್ದರೆ, ಬೇರೆ ಗುರುಕುಲಕ್ಕೆ ಹೋಗೋಣ ಎಂದು ತಮ್ಮಲ್ಲೇ ಮಾತನಾಡಿಕೊಂಡರು.
ಎರಡು ದಿನ ಆದಮೇಲೆ, ಪಾಠ ಮುಗಿದ ನಂತರ
"ಗುರುಗಳೆ, ತಮ್ಮಿಂದ ಉತ್ತರ ದೊರೆಯಲಿಲ್ಲ, ನಮಗೇಕೋ ಈ ಗುರುಕುಲದಲ್ಲಿ ಮುಂದುವರಿಯಲು ಸಂಕೋಚವಾಗುತ್ತಿದೆ, ಎಲ್ಲಿ ನಾವುಗಳು ಅಲ್ಪ ಜ್ಝಾನಿಗಲಾಗುತ್ತೇವೆಯೋ ಎಂದು" ಎಲ್ಲರೊ ಒಕ್ಕೊರಲಿನಿಂದ ಹೇಳಿದರು.
ಗುರುಗಳು ಶಾಂತಚಿತ್ತರಾಗಿ "ಅಂದಹಾಗೆ ನಿಮ್ಮ ಸಂದೇಹವಾದರು ಏನು" ಎಂದರು
ಶಿಷ್ಯೋತ್ತಮನಿಗೆ ಎಲ್ಲಿಲ್ಲದ ಕೋಪ, ಮತ್ತೆ ನುಡಿದ
" ಈ ಪ್ರಪಂಚದಲ್ಲಿ ಅತೀ ಬೆಲೆ ಬಾಳುವಂತದ್ದು ಯಾವುದು, ಬೆಲೆಯೇ ಇಲ್ಲದ್ದು ಯಾವುದು"
"ಎರಡೊ ಒಂದೇ" ಎಂದರು ಗುರುಗಳು.
ಈಗ ಎಲ್ಲ ಶಿಷ್ಯರಿಗೊ ಒಂದೇ ಅಲೋಚನೆ,
"ಹೋಗಿ ಹೋಗಿ ಇಂತ ಮೂರ್ಖ ಗುರುಗಳ ಬಳಿ ಬಂದೆವಲ್ಲ ಛೆ! ಅತೀ ಬೆಲೆ ಬಾಳುವುದು ಬಂಗಾರ ಅಥವಾ ವಜ್ರ, ಬೆಲೆ ಇಲ್ಲದ್ದು, ಒಂದು ಹಿಡಿ ಮಣ್ಣು" ಇಷ್ಟು ತಿಳಿಯಲ್ಲಿಲ್ಲವೇ ನಿಮಗೆ ಎಂದುಕೊಂಡರು
.
ಗುರುಗಳು ಮುಂದುವರುಸಿದರು,
"ಮಕ್ಕಳೇ, ಯಾವಾಗ ಯಾವ ಮನುಷ್ಯ ತನ್ನದೆಲ್ಲವನ್ನು ಕಳೆದುಕೊಂಡು, ಅಥವಾ ತಾನಾಗೆ ನೊಂದು , ಅಥವಾ ತಾನಾಗೆ ಕಷ್ಟದಲ್ಲಿದ್ದಾಗ ನಮ್ಮ ಬಳಿ ಉಪದೇಶ ಅಥವಾ ಸಹಾಯಕ್ಕಾಗಿ ಬರುತ್ತಾನೋ ಆಗ ನಾವು ಅವನಿಗೆ ಉಪದೇಶಿಸಿದರೆ, ದಾರಿತೋರಿದರೆ, ಸಹಾಯ ಮಾಡಿದರೆ ಅದಕ್ಕೆ ಅತ್ಯಮೊಲ್ಯವಾದ ಬೆಲೆ, ಅದನ್ನು ಬಿಟ್ಟು ನಾವಾಗಿಯೆ ಸ್ವಯಂಪ್ರೇರಣೆಯಿಂದ, ಅಯ್ಯೋ ಇಂತಹವರು ಕಷ್ಟ ಪಡುತ್ತಿದ್ದಾರೆ, ಅಥವಾ ಇವರಿಗೆ ಈ ವಿಷಯದಲ್ಲಿ ತಿಳಿದಿಲ್ಲ ನಷ್ಟ ಅನುಭವಿಸುತ್ತಾರೆ ಎಂದು ಹೋಗಿ ಉಪದೇಶ ಮಾಡಿದರೆ ಅದಕ್ಕೆ ಎಳ್ಳಷ್ಟು ಬೆಲೆ ಇರುವುದಿಲ್ಲ" ಎಂದರು.
ಶಿಷ್ಯರೆಲ್ಲರೂ ತಮ್ಮ ಅಧಿಕಪ್ರಸಂಗಕ್ಕಾಗಿ ಕ್ಷಮಿಸಿ ಎಂದು ಗುರುಗಳ ಪಾದಕ್ಕೆರಗಿದರು
Comments
ಉ: ಅತ್ಯಮೊಲ್ಯವಾದದ್ದು.
In reply to ಉ: ಅತ್ಯಮೊಲ್ಯವಾದದ್ದು. by bhalle
ಉ: ಅತ್ಯಮೊಲ್ಯವಾದದ್ದು.
In reply to ಉ: ಅತ್ಯಮೊಲ್ಯವಾದದ್ದು. by kavinagaraj
ಉ: ಅತ್ಯಮೊಲ್ಯವಾದದ್ದು.
In reply to ಉ: ಅತ್ಯಮೊಲ್ಯವಾದದ್ದು. by bhalle
ಉ: ಅತ್ಯಮೊಲ್ಯವಾದದ್ದು.
ಉ: ಅತ್ಯಮೊಲ್ಯವಾದದ್ದು.
ಉ: ಅತ್ಯಮೊಲ್ಯವಾದದ್ದು.
ಉ: ಅತ್ಯಮೊಲ್ಯವಾದದ್ದು.
In reply to ಉ: ಅತ್ಯಮೊಲ್ಯವಾದದ್ದು. by gopaljsr
ಉ: ಅತ್ಯಮೊಲ್ಯವಾದದ್ದು.
ಉ: ಅತ್ಯಮೊಲ್ಯವಾದದ್ದು.
In reply to ಉ: ಅತ್ಯಮೊಲ್ಯವಾದದ್ದು. by Guru M Shetty
ಉ: ಅತ್ಯಮೊಲ್ಯವಾದದ್ದು.