ಅತ್ಯಾಚಾರ, ಲೈಂಗಿಕ ದೌರ್ಜನ್ಯ ವಿರೋಧಿಸಿ, ಮಹಿಳೆಯರ ರಕ್ಷಣೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ.
ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಅಮಾನವೀಯ ಪ್ರಕರಣಗಳನ್ನು ಜಾತಿ,ಧರ್ಮದ ಆಧಾರದಲ್ಲಿ ಕೀಳುಮಟ್ಟದ ರಾಜಕೀಯ ಮಾಡುತ್ತಿರುವವರ ವಿರುದ್ಧ ಮತ್ತು ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳು ಮತ್ತು ಅತ್ಯಾಚಾರಗಳ ನಿಯಂತ್ರಣಕ್ಕೆ ಒತ್ತಾಯಿಸಿ ಎಸ್.ಎಫ್.ಐ, ಡಿ,ವೈ,ಎಫ್,ಐ, ಜೆ,ಎಮ್.ಎಸ್ ಸಂಘಟನೆಗಳು ಇಂದು ಕಾರ್ಪೋರೇಷನ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಜನವಾದಿ ಮಹಿಳಾ ಸಂಘಟನೆ ರಾಜ್ಯಉಪಾದ್ಯಕ್ಷರಾದ್ಯ ಗೌರಮ್ಮ ಮಾತನಾಡಿ ಹಿಂದೆ ರಾಜ್ಯದ ಸಕರ್ಾರದ ಚುಕ್ಕಾಣಿ ಹಿಡಿದಿದ್ದ ಬಿ.ಜೆ.ಪಿ ಪಕ್ಷದ ಅಧಿಕಾರಾವಧಿಯಲ್ಲಿ 47800 ಲೈಂಗಿಕ ದೌರ್ಜನ್ಯಗಳು,2700 ಕ್ಕೂ ಹೆಚ್ಚು ಅತ್ಯಾಚಾರಗಳು ನಡೆದಿವೆ. ಧರ್ಮಸ್ಥಳದ ಸೌಜನ್ಯ ಆತ್ಯಾಚಾರ ಕೊಲೆಯ ಸಂಧರ್ಭದಲ್ಲಿ, ಇವರ ಮಂತ್ರಿ ಮಂಡಲದ ಸಚಿವರ ಅನಾಚಾರಗಳ ಸಂದರ್ಭದಲ್ಲಿ ಕಣ್ಣ್ಮುಚ್ಚಿ ಕುಳಿತ ಬಿ.ಜೆ.ಪಿ ಗೆ ಈಗ ಮಾತನಾಡುವ ನೈತಿಕತೆ ಇದೆಯೇ ಎಂದು ಅವರೇ ಪ್ರಶ್ನಿಸಿಕೊಳ್ಳಬೇಕು. ರಾಜ್ಯದ ತುಂಬೆಲ್ಲ ನಡೆಯುತ್ತಿರುವ ಅತ್ಯಾಚಾರಗಳ ವಿರುದ್ಧ ಸೊಲ್ಲೆತ್ತದೇ ಇರುವ ಬಿ.ಜೆ.ಪಿ ತೀರ್ಥಹಳ್ಳಿಯ ನಂದಿತಾ ಪ್ರಕರಣದ ಬಗ್ಗೆ ತೋರಿಸುತ್ತಿರುವ ವಿಶೇಷ ಕಾಳಜಿಯ ಹಿಂದಿನ ಕೀಳುಮಟ್ಟದ ರಾಜಕೀಯ ಅಸಹ್ಯ ಹುಟ್ಟಿಸುತ್ತಿದೆ ಎಂದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್.ಎಫ್.ಐ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ಮಾತನಾಡಿ ವಿಬ್ಗಯಾರಶಾಲೆ, ಆರ್ಕಿಡ್ ಶಾಲೆ, ಕೇಂಬ್ರಿಡ್ಜ್ಶಾಲೆಯಂತಹ ಖಾಸಗಿ ಶಾಲೆಗಳು ಹೆಣ್ಣುಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಉದ್ದಟತನ ತೋರಿ ಸರ್ಕಾರಕ್ಕೇ ಸವಾಲೆಸಗಿವೆ. ಇವುಗಳ ವಿರುದ್ಧ ಕ್ರಮಕೈಗೊಳ್ಳುವ ಸಕರ್ಾರದ ಹೇಳಿಕೆಯನ್ನು ಸ್ವಾಗತಿಸುತ್ತೇವೆ. ಮತ್ತು ಅದು ಅಕ್ಷರಶಃ ಎಲ್ಲ ವಿದ್ಯಾಸಂಸ್ಥೆಗಳನ್ನೂ ಕಟ್ಟುನಿಟ್ಟಿನ ಕ್ರಮದಡಿ ತರುವ ತುರ್ತಿನ ಕೆಲಸವಾಗಬೇಕೆಂದು ಒತ್ತಾಯಿಸಿದರು. ರಾಮಚಂದ್ರಾಪುರ ಮಠದ ಗಾಯಕಿಯಾಗಿದ್ದೂ ತಮ್ಮ ಮೇಲೆ ನಡೆದ ಅತ್ಯಾಚಾರದ ವಿರುದ್ಧ ದೂರು ನೀಡಿರುವ ಪ್ರೇಮಲತಾ ಪ್ರಕರಣ, ಕೇಂದ್ರ ಸಚಿವ ಸದಾನಂದಗೌಡರ ಮಗನಿಂದ ಪ್ರೀತಿಯ ವಂಚನೆಗೊಳಗಾಗಿ ದೂರು ನೀಡಿರುವ ಮೈತ್ರಿ ಪ್ರಕರಣಗಳಲ್ಲಿ ಪೋಲೀಸರು ಪ್ರಭಾವಕ್ಕೆ ಮಣಿದಿರುವುದು ಕಂಡುಬಂದರೆ, ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿಯ ನಂದಿತಾ ಪ್ರಕರಣದಲ್ಲಿ ಮುಕ್ತ ಮತ್ತು ನಿಸ್ಪಕ್ಷಪಾತ ತನಿಖೆ ಆಗುವ ಮುನ್ನವೇ ರಾಜಕೀಯ ಕೆಸರೆರಚಾಟ ನಡೆಯುತ್ತಿದೆ. ಮಹಿಳೆಯರ ಸುರಕ್ಷತಯೆಂಬುದು ಎಲ್ಲ ರಾಜಕೀಯ ಪಕ್ಷಗಳ ರಾಜಕೀಯ ಕರ್ತವ್ಯವಾಗುವ ಬದಲು ರಾಜಕೀಯ ಲಾಭ ಪಡೆಯುವ ದಾಳವಾಗಿಸುತ್ತಿರುವುದು ರಾಜ್ಯದ ಮಹಿಳೆಯರಿಗೆ ಮಾಡುವ ಅಪಮಾನವಾಗಿದೆ.
ಜೆ.ಎಮ್.ಎಸ್ ರಾಜ್ಯ ಕಾರ್ಯದರ್ಶಿ ಕೆ.ಎಸ್.ಲಕ್ಮಿ ಮಾತನಾಡಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ರಾಷ್ಟ್ರೀಯ ಪಕ್ಷವಾಗಿರುವ ಬಿ.ಜೆ.ಪಿ ಕೀಳು ಮಟ್ಟದ ರಾಜಕೀಯ ಕೈಬಿಟ್ಟು. ದೌರ್ಜನ್ಯಗಳ ತಡೆಗಾಗಿ ರಚನಾತ್ಮಕ ಸಲಹೆಗಳನ್ನು ನೀಡಬೇಕೆಂದು ಒತ್ತಾಯಿಸುತ್ತೇವೆ. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳು ರಾಷ್ಟೀಯ ಸಮಸ್ಯೆಯಾಗಿದ್ದು ಮಹಿಳೆಯರ ವಿರುದ್ಧದ ಹಿಂಸೆ ಮುಕ್ತ ಭಾರತಕ್ಕಾಗಿ ಕ್ರಮಗಳನ್ನು ಕೈಗೊಳ್ಳಿ ಎಂದು ಆಗ್ರಹಿಸಿದರು.
ಡಿ.ವೈ.ಎಫ್.ಐ ರಾಜ್ಯ ಕಾರ್ಯದರ್ಶಿ ರಾಜಶೇಖರ ಮೂರ್ತಿಮಾತನಾಡಿ ರಾಜ್ಯ ಕಾಂಗ್ರೆಸ್ ಸಕರ್ಾರ ತಕ್ಷಣದ ಸುಧಾರಣಾ ಕ್ರಮಗಳೊಂದಿಗೆ, ಬಹುಮುಖೀ ಧೀಘರ್ಾವಧಿ ಕ್ರಮ ಕೈಗೊಳ್ಳಬೇಕು. ಪ್ರಭಾವ ಮುಕ್ತ ತನಿಖೆ, ನಿಧರ್ಾಕ್ಷಿಣ್ಯ ಕ್ರಮಗಳ ಮೂಲಕ ಸುರಕ್ಷತೆಯನ್ನು ಖಾತ್ರಿಗೊಳಿಸಬೇಕು. ದೌರ್ಜನ್ಯಗಳ ತಡೆಗಾಗಿ ನಡೆಯುತ್ತಿರುವ ಸಕರ್ಾರದ ಎಲ್ಲ ಪ್ರಕ್ರಿಯೆಗಳನ್ನು ಪ್ರಜಾಸತ್ತಾತ್ಮಕಗೊಳಿಸಬೇಕು. ಸಕರ್ಾರದ ಎಲ್ಲ ನೀತಿಗಳನ್ನು ಲಿಂಗಸಂವೇಧನಾ ಶೀಲಗೊಳಿಸಲು ಸಮರೋಪಾದಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ. ನ್ಯಾಯ ಮೂತರ್ಿವಮರ್ಾ ಕಮಿಟಿಯ ಶಿಫಾರಸ್ಸುಗಳನ್ನು ನಿಧರ್ಿಷ್ಟ ಕಾಲಮಿತಿಯ ಒಳಗೆ ಜಾರಿಗೊಳಿಸಲು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಎಸ್.ಎಫ್.ಐ ಮುಖಂಡರಾದ ಹರಿಪ್ರಸಾದ್, ಮಹೇಶ್, ಡಿ,ವೈ,ಎಫ್,ಐ ನ ಪ್ರಸಾದ್, ಜೆ,ಎಮ್,ಎಸ್ ನ ವಿಮಲಾ, ಶಾರದಾ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.