ಅದಕ್ಕೆ ಅಮ್ಮ ನಾನು ಓದಲ್ಲ...!

ಅದಕ್ಕೆ ಅಮ್ಮ ನಾನು ಓದಲ್ಲ...!

ಕವನ

ಮೂರು ವರ್ಷಗಳ ಸತತ ಉಸಿರುಗಟ್ಟಿಸಿದ ವಾತಾವರಣ

ಯಾರು ಕೇಳುತ್ತಿಲ್ಲ ನೋವುಗಳ ಅನಾವರಣ

ಹಣ್ಣು ಹಂಪಲು ಸಕ್ಕರೆ ನೀಡುವ ನೆಪದಲ್ಲಿ ಮತ್ತಿನ ಸಿಂಪಡಣಾ 

ಮುಟ್ಟಿಸಿಕೊಳ್ಳಲು ಭಯ ಆತಂಕ ದುಗುಡ ದುಮ್ಮಾನ ಆದರೂ ಗುಪ್ತಾಂಗಗಳ ಮೇಲಿನ ದೌರ್ಜನ್ಯ

ಹಣವಂತರ ಅಧಿಕಾರಕ್ಕೆ ಅಪ್ರಾಪ್ತರ ಶೀಲಾಹರಣ

ಅದಕ್ಕೆ ಅಮ್ಮ ನಾನು ಓದಲ್ಲ...!

 

ನಮನ್ನು ಕಾಪಾಡಬೇಕಾದವಳೇ ಪೋಷಿಸಬೇಕಾದವಳೇ ತಿದ್ದಿ ತೀಡಬೇಕಾದವಳೇ ನೋಡಿಕೊಳ್ಳುವವಳೇ ರಾಕ್ಷಸಿಯೇ ದೂಡಿದಳು ಬಲವಂತವಾಗಿ ತಳ್ಳಿದಳು ನರಕ ಕೂಪಕ್ಕೆ 

ಇಷ್ಟೆಲ್ಲಾ ಯಾತನೇ ಅನುಭವಿಸಿದರೂ ಇನ್ನೂ ಹೆಚ್ಚೆತ್ತಿಲ್ಲ ಸಮಾಜ 

ಇದನ್ನು ನೋಡಿ ತಗೋಳ್ಳತ್ತಿದೆ ಮಜಾಮಜ

ದೂರು ದಾಖಾಲಾದರು ನನಗಾಗಿದೆ ಭಯದ ಅಭದ್ರತೆ ಅವರಿಗಿದೆ ಐಷಾರಾಮಿ ಭದ್ರತೆ

ನಾನೇನು ಮಾಡಲಿ ಏನೂ ಇಲ್ಲದವಳು 

ಅದಕ್ಕೆ ಅಮ್ಮ ನಾನು ಓದಲ್ಲ...!

 

ಶಾಲೆಯಲ್ಲಿ ಚೆನ್ನಾಗಿ ಓದುವಳು 

ಬರೆಯುವಳು ಎಂದು ಅಟ್ಟಕೇರಿಸಿ ಮಳ್ಳಿ ಮಳ್ಳಿ ಬಿಟ್ಟಿ ಮಾತು ಮಾತಾಡಿ 

ನೀರು ಕೊಡು ಎಂದು ಕೈ ಮುಟ್ಟಿ

ಚೇರು ತಗೊಂಡು ಬಾ ಎಂದು ಮೈಮುಟ್ಟಿ ತೀಟೇ ತೀರಿಸ್ಕೂಳ್ತಾರೆ 

ನೀ ಕ್ರೀಡೆಯಲ್ಲಿ ಸೂಪರ್ ಅಂತಾರೆ ರತಿಕ್ರೀಡೆಗೆ ಕರೀತಾರೆ

ಅದಕ್ಕೆ ಅಮ್ಮ ನಾನು ಓದಲ್ಲ...!

 

ಎಲ್ಲಾ ಇದ್ದವರು ಎನು ಬೇಕಾದರೂ ಮಾಡಬಲ್ಲರು

ಏನೂ ಇಲ್ಲದವರು ಇದ್ದರೆ ಇಲ್ಲಿ ಯಾವುದಕ್ಕೂ ಪ್ರಯೋಜನವಿಲ್ಲ

ಕಾನೂನಿನ ಕದ ತಟ್ಟಂಗಿಲ್ಲ 

ನ್ಯಾಯದ ಬಾಗಿಲು ಬಡಿಯಂಗಿಲ್ಲ 

ಅದಕ್ಕೆ ಅಮ್ಮ ನಾನು ಓದಲ್ಲ...!

 

ಡಿಸಿಯಾದರು ಕೇಳಂಗಿಲ್ಲ ಎಸ್ಪಿಯಾದರು ನೋಡಲ್ಲ 

ಆದರೂ ಮಕ್ಕಳ ಹೆಸರಿನಲ್ಲಿ ಲಕ್ಷ ಲಕ್ಷ ಬಿಲ್ಲು ಬಿಡಲ್ಲ

ಅವರಿಗಿದೆ ರಾಜಕೀಯದ ಪ್ರಭಾವ 

ನನಗಿದೆ ಸ್ವಾಭಿಮಾನದ ಸ್ವಭಾವ

ಅದಕ್ಕೆ ಅಮ್ಮ ನಾನು ಓದಲ್ಲ...!

-ಭಟ್ರಹಳ್ಳಿ ಧನಂಜಯ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್