ಅದಲು - ಬದಲು
ಕವನ
ಚುನಾವಣೆಗೆ ಮೊದಲು,
ರಸ್ತೆಗಳು ಹೊಸ ಮದುವಣಗಿತ್ತಿಯಂತೆ ಶ್ರುಂಗಾರಗೊಳ್ಳುತ್ತವೆ.
ಮತದಾರನ ಮನೆ ದೇಗುಲವಾಗುತ್ತದೆ.
ಮತದಾರ ದೇವರಾಗುತ್ತಾನೆ, ಪ್ರಭುವಾಗುತ್ತಾನೆ, ದೊರೆಯಾಗುತ್ತಾನೆ.
ಚುನಾವಣೆ ನಂತರ,
ಆದೇ ರಸ್ತೆಗಳು ಅತ್ತೆಯಿಂದ ಪೀಡಿತ ಸೊಸೆಯಂತಾಗುತ್ತವೆ.
ಮತದಾರನ ಮನೆಗಳು ಮಸಣದಂತಾಗುತ್ತವೆ.
ಮತದಾರ ಭಿಕ್ಷುಕನಾಗುತ್ತಾನೆ.
ಚಿತ್ರ್