ಅದಲು-ಬದಲು...

ಅದಲು-ಬದಲು...

ಕವನ

ರವಿಯ ಉದಯದಿ ಬೆಳಕು ಮೂಡಿದೆ

ಬೆರಗು ಹರಡಿದೆ ಸುತ್ತಲೂ

ನಿಜವ ತಿಳಿಯಲು ದಾರಿ ಕಾಣದು

ಕಲಿಕೆಯಾಗಿದೆ ಕತ್ತಲು..

 

ಧ್ವೇಷ ಭಾಷೆಯ ನಡುವೆಯೊಳಗಣ

ದೇಶಭಕ್ತಿಯ ಹುಡುಕಲು

ಕಾಣದಾಗಿದೆ ಸಾರ ಸಂಗ್ರಹ

ಭಟ್ಟಿ ಇಳಿಸಿದ ಪಠ್ಯವು..

 

ತತ್ತ್ವ ಚಿಂತನ ಶಾಂತಿ ಮಂಥನ

ಯುಗಗಲೊಳಗೆಯು ಅಮರವು

ಸತ್ಯ ಸಾಯದು ಮಿಥ್ಯ ಗೆಲ್ಲದು

ಜಗಕೆ ತಿಳಿಯಲಿ ನ್ಯಾಯವು..

 

ಮೋಸ ಜಾಲದ ಕುಹಕ ಹಬ್ಬಲು

ಸಾಧು ಸಂತರ ಮರೆಯಲು

ಹೊಸತು ನೀತಿಯ ನೆಪವ ಹುಡುಕುತ

ಮೂಲ ಮಂತ್ರವ ಮರೆಯಲು..

 

ತಿದ್ದುಪಡಿಯಲಿ ನಿಜವು ಇದ್ದರೆ

ಸುಲಭವದುವೇ ಜ್ಞಾನಕೆ

ಜನತೆ ಬಯಸಿದೆ ಸುಖದ ಜೀವನ

ಸೇಡು ತೊಲಗಲಿ ಮೆತ್ತಗೆ..

 

-'ಮೌನರಾಗ' ಶಮೀರ್ ನಂದಿಬೆಟ್ಟ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್