ಅದಾವುದು..!
ಬರಹ
ಮರೆಗೆ ನಿಂತು ಕಾಯುತಿರುವ
ಕರಿಯ ನೆರಳು ಯಾವುದು?
ಸೋಜಿಗವಾ ಸರಿಸಿ ನಿಂತ
ವೈಚಿತ್ರ್ಯ ಇದಾವುದು?
ಸುತ್ತ ಚಿಗುರಿದಸುರಲಿ
ಚಿಟ್ಟೆ ಪಕ್ಷಿ ಧನಿಯಲಿ
ಅಲೆ ಅಲೆ ಯಾಗಿ ಸಾಗುತಿರುವ
ಜಲಧಾರೆಯ ಪರಿಯಲಿ..
ಹುಟ್ಟು ಸಾವ ನಡುವಲಿ
ಅಡಗಿಕುಳಿತ ಬಾಳಲಿ
ಪ್ರತಿ ಹೆಜ್ಜೆಗು ಕಾವಲಾಗಿ
ಕಾದ ನೆರಳು ಯಾವುದು?
ಒಮ್ಮೆನೋಡುವಾತುರಾ
ಧೈನ್ಯತೆಯಾ ಮಂದಿರಾ
ಭಕ್ತಿ ಬಾವ ಭರಿಸು ನೀ
ಚಿತ್ತ ಸುಧೆಯ ಹರಸು ನೀ..