ಅದು..... ಅದಲ್ಲ....! ಮರಾಯ್ರೆ.............. ಇದು!!!!!
ಬರಹ
ಹೋಯ್ ಇದು.... ಅದಲ್ವಾ?
"ಮರೀ ಇಲ್ಲಿ ಬಾ, ಬೇಸಗೆ ಅಲ್ವಾ? ಈ ಸಾರು ಸ್ವಲ್ಪ ಟೀವಿಯಲ್ಲಿ ಇಟ್ಟು ಬಾ!, ಸಂಜೆಗೆ ಪುನಹ ಬಿಸಿ ಮಾಡಿ ತಿನ್ನೋಣ" ಅಮ್ಮ,.. ಟೀವಿಯಲ್ಲಿಂದ ಮುಖವೆತ್ತದೆ!
"ಏನಮ್ಮ ಫ್ರಿಜ್ಜಿಗೆ ಟೀವಿ ಅಂತ ಇದ್ದೆಯಲ್ಲಾ....ಎಲ್ಲಿದೆ ಧ್ಯಾನ?"
"ಯಾಕೆ ನೀನು ಮೊನ್ನೆ ಪ್ರಿಜ್ (ಲಿಫ್ಟ್) ನೊಳಗಿಂದಾನೇ ಸಿಕ್ಕಿಬಿದ್ದಿದ್ದೆ ಅಂತ ಫೋನ್ ಮಾಡಿದ್ದೆಯಲ್ಲಾ?"
ಇರಲಿ ಬಿಡಮ್ಮ ದೊಡ್ಡಪ್ಪನಂತೂ "ಮಹಾ ಬದಲಿಗ", ಮೊನ್ನೆ ಅವರಿಗೆ ಜ್ವರ ಬಂದಾಗ ವೈದ್ಯರು ಥರ್ಮಾಸ್ ಫ್ಲಾಸ್ಕ್ ನಲ್ಲಿ ಜ್ವರ ನೋಡಿದ್ದರಂತೆ! ಗೊತ್ತಾ?
ಮತ್ತೆ ಅವರು ತೆಗೆದುಕೊಳ್ಳುವ ಕಾರು ಯಾವುದು ಗೊತ್ತಾ? " ಹುಂಡೈ ಆಲ್ಟ್ರೋ"
ನಮ್ಮ ಮನೆಗೆ ಬರುವಾಗ ಅವರಿಗೆ ಈಗ ಫ್ರಿಜ್ ನಲ್ಲಿ ಬರಲು ಹೆದರಿಕೆ ಇಲ್ಲವಂತೆ.
ಮೊನ್ನೆಯಂತೂ ಅವರು ವಿಡಿಯೋನಲ್ಲಿ " ಲೂಸ್ (ಸ್ಲೋ) ಮೋಷನ್ನಲ್ಲಿ ನಡೆದದ್ದು ತುಂಬಾ ಚೆನ್ನಾಗಿ ಬಂತಂತೆ"