ಅಧಿಕು, ಉಣಾ, ಗುಣಿಲೆ, ಭಾಗಿಲೆ!
ಹಾಗೆ ಸುಮ್ಮನೆ ಪ್ರಾಥಮಿಕ ಶಾಲೆಯ ನೆನಪು ಮಾಡಿಕೊಳ್ಳುತ್ತಿದ್ದೆ. ಶೀರ್ಷಿಕೆಯ ಪದಗಳು +,-,*,/ ಚಿಹ್ನೆಗಳಿಗೆ ನಮ್ಮ ಪ್ರಾಂತ್ಯದಲ್ಲಿ ಸಂವಾದಿಯಾಗಿ ಬಳಸುತ್ತಿದ್ದ ಪದಗಳು. ಪಿ ಯು ಸಿ ನಂತರ ಪ್ಲಸ್, ಮೈನಸ್, ಇಂಟು, ಡಿವೈಡೆಡ್ ಬೈ ಗಳು ಜಾಗ ಆಕ್ರಮಿಸಿಕೊಂಡವು. ಆದರೆ ಮಗ್ಗಿಯನ್ನು ಕಾಲೇಜಿನಲ್ಲಿ ಕಲಿಸಲಿಲ್ಲವಾದ್ದರಿಂದ, ಸಂಖ್ಯೆಗಳು ಸ್ವಲ್ಪ ಕನ್ನಡತನವನ್ನುಳಿಸಿಕೊಂಡಿವೆ!
ನನ್ನ ಕುತೂಹಲವೇನೆಂದರೆ, ರಾಜ್ಯದ ಎಲ್ಲ ಕಡೆಯೂ ಇದೇ ಪದಗಳನ್ನು ಬಳಸುತ್ತಿದ್ದ(ದ್ದಾ)ರಾ? ಅದೇ ರೀತಿ =, <=, :, does not equal, is perpendicular to, ಇತ್ಯಾದಿಗಳ ಕತೆ ಏನು? ನೀವು ಕನ್ನಡ ಮಾಧ್ಯಮದಲ್ಲಿ ಓದಿದ್ದರಂತೂ ಇದಕ್ಕೆ ಪ್ರತಿಕ್ರಿಯೆ ಬರೆಯಲೇ ಬೇಕು!
ಇನ್ನೊಂದು ವಿಷಯ.
a is lesser than b ಅನ್ನೋದನ್ನ
a < b ಅಂತಂದು, < ಅಂದ್ರೆ is lesser than ಅಂತ ಕರೆದರು.
ಅದಕ್ಕೆ ಕನ್ನಡದ ಸಮರೂಪಿ ಏನು ಗೊತ್ತ?
"a ಚಿಕ್ಕದು b ಗಿಂತ" ಅಂತೆ. ಅಸಹಜ ಎನಿಸುತ್ತದಲ್ವಾ? ಚಿಹ್ನೆಗಳೂ ಕನ್ನಡದ ನುಡಿಗಟ್ಟೂ ಒಂದಕ್ಕೊಂದು compatible ಇಲ್ಲ.