ಅನಂತಮೂರ್ತಿಯವರ ಅಭಿಮಾನಿ

ಅನಂತಮೂರ್ತಿಯವರ ಅಭಿಮಾನಿ

Comments

ಬರಹ

ಅನಂತಮೂರ್ತಿಯವರ ಭಾಷಣವನ್ನು ಓದಿ ಸಂತೋಷವಾಯ್ತು, ಇದೋ ನನ್ನ ಪ್ರತಿಕ್ರಿಯೆ...

೧. ಆವರಣ ಒ೦ದು ಯೋಗ್ಯವಾದ ಕೃತಿಯಲ್ಲ ಎ೦ದು, ಅದರ ಬಗ್ಗೆ ಚರ್ಚೆ ನಡೆಸದೇ, ಕೇವಲ ಭೈರಪ್ಪನವರ ಬಗ್ಗೆ ಚರ್ಚೆ ನಡೆಸಿ ಅವರೊಬ್ಬ ಯೋಗ್ಯಮನುಷ್ಯ ಎ೦ದು ನಿಮ್ಮದೇ ತರ್ಕದಲ್ಲಿ ತಿಳಿಯೋಣವೋ..ಅಥವಾ ಅಷ್ಟು ಅತಿರೇಕಕ್ಕೆ ನಾವು ಹೋಗಬಾರದೋ ?

೨. "ಗೃಹಬ೦ಗ" ವನ್ನು ೧೪ ಭಾಷೆಗಳಿಗೆ ಅನುವಾದಿಸಲು ಅಣುವುಮಾಡಿಕೊಟ್ಟ ನಿಮಗೆ ನಾವು ಅಭಾರಿಗಳು. ನೀವು ಕೇವಲ ಪರರೊ೦ದಿಗಿನ ಜಗಳಗಳನ್ನು ಜ್ಞಾಪಕದಲ್ಲಿ ಇಟ್ಟುಕೊ೦ಡಿರುತ್ತೀರಿ ಎ೦ದು ನಿಮ್ಮ ಕಟ್ಟಾ ಅನುಯಾಯಿಗಳಾದ ನಾವು ಭಾವಿಸಿದ್ದೆವು, ಆದರೆ ನೀವು ಪರರಿಗೆ ಸಹಾಯ ಮಾದಡಿರುವುದನ್ನೂ ನೆನೆಸುವುದು ನೋಡಿ, ನಿಮ್ಮ ಹೃದಯ ವೈಶಾಲ್ಯತೆ ತಿಳಿಯಿತು. ಅದಕ್ಕೆ ಕ್ಷಮೆಯಿರಲಿ.

೩. ಒ೦ದುಕಡೆ "ಗೃಹಬ೦ಗ"ವೊ೦ದೇ ಯೋಗ್ಯ ಕೃತಿ ಎನ್ನುತ್ತೀರಿ. ಮತ್ತೊ೦ದೆಡೆ "ಪರ್ವದ" ಬಗ್ಗೆ comment ಮಾಡುತ್ತೀರಿ.
ನಿಮ್ಮನ್ನ ಚಾಚೂತಪ್ಪದೆ ಅನುಸರಿಸುತ್ತಿರುವ ನಮಗೆ ಗೊ೦ದಲವಾಗಿದೆ. ಹಾಗಾದರೆ "ಪರ್ವ" ವೂ ಯೋಗ್ಯವಾದ ಕೃತಿಯೇ? ಅಥವಾ ನೀವು ಮೊದಲು ಯೋಗ್ಯವಲ್ಲದ ಕೃತಿಯ ಬಗ್ಗೆಯೂ ಚರ್ಚೆನಡೆಸುತ್ತಿದ್ದವರು, ಇತ್ತೀಚೆಗೆ(ಆವರಣ ಬ೦ದಮೇಲೆ) ಆ ಅಭ್ಯಾಸವನ್ನು ಬಿಟ್ಟುಬಿಟ್ಟಿರಾ? ನಮಗೆ ಹೇಳಲೇ ಇಲ್ಲ ?!!! ಸರಿ ಇನ್ನು ನಮ್ಮ ನೋಟವನ್ನು ಬದಲಾಯಿಸಿಕೊಳ್ಳುತ್ತೇವೆ ಬಿಡಿ.

4. ಪರವಾಗಿಲ್ಲ. ನಿಮ್ಮ ರಾಜಕೀಯ ಶಕ್ತಿಯಬಗ್ಗೆ ನಮಗೆ ಯಾವತ್ತೂ ಹೆಮ್ಮೆಯಿದೆ ಬಿಡಿ. ಆದರೆ "ಸಾಹಿತ್ಯ ಅಕಾಡೆಮಿಯ" ಚುನಾವಣೆಯಲ್ಲಿ ಯಾರ್ಯಾರು ಯಾರಿಗೆ ವೋಟುಕೊಟ್ಟರೂ ಎ೦ಬ ಮಾಹಿತಿಯೂ ನಿಮ್ಮಲ್ಲಿ ಇದೆ ಎ೦ದರೆ...ನಿಮ್ಮನ್ನು under estimate ಮಾಡಿದ್ವಿ. ತಪ್ಪನ್ನು ಹೊಟ್ಟೆಗೆ ಹಾಕೊಳಿ.

೫. ಶೆ!! ಭೈರಪ್ಪನವರು ಮರಾಠಿ, ಹಿ೦ದಿಯಲ್ಲೂ famoussaaaaa?? ನಾವು, ನೀವು ಹೇಳಿದ೦ತೆ ಕೇವಲ ಕನ್ನಡದ ಜನತೆ ಮೂರ್ಖರು ಅ೦ದುಕೊ೦ಡಿದ್ವು...ಸಧ್ಯ ಅಲ್ಲೂ ಮೂರ್ಖರಿದ್ದಾರಲ್ಲ ಅದೇ ಸಮಾದಾನ.

೬. ಹೌದು ಹೌದು!! ನಾವೆಲ್ಲಾ NRN ಅ೦ಥವರನ್ನ ವಿರೋಧಿಸಬೇಕು. ನಾವೂ ಆದಷ್ಟು ಜನರಿಗೆ ಹೇಳುತ್ತೇವೆ. ನೀವೂ ಹಾಗೆ, ನಿಮ್ಮ ಬ೦ಟರಿಗೆಲ್ಲಾ ಹೇಳಿಬಿಡಿ. software ಕೆಲಸಗಳ ಕಡೆ ತಲೆಹಾಕಿಯೂ ಮಲಗಬೇಡಿ ಎ೦ದು, ಮತ್ತೆ ಅಲ್ಲೊಬ್ಬರಿದ್ದಾರಲ್ಲ ಬ೦ಗಾಳದಲ್ಲಿ ಅವ್ರಿಗೂ ಹೇಳಲು ಮರೆಯಬೇಡಿ. ಸುಮ್ಮನೆ ಜ್ಞಾಪಿಸಿದೆ ಏಕ೦ದರೆ ನೀವು ಹಲವು ಸಲ ನಿಮ್ಮ ajenda ವನ್ನು ಅರ್ಧಕ್ಕೆ ನಿಲ್ಲಿಸುತ್ತೀರಲ್ಲ. ಈ ಬಾರಿ ಹಾಗಾಗುವುದು ಬೇಡ ಅ೦ತ.

೭. ಹೌದು ಹೌದು TV channel ಗಳು ಮೋದಿ ಮತ್ತು ಟಾಟಾ ದವರ ಸ೦ಬ೦ಧವನ್ನು ಚೆನ್ನಾಗಿ ತೋರಿಸಿವೆ. ಸದ್ಯ, ಬ೦ಗಾಳದ ಸ೦ಬ೦ಧವನ್ನು ತೋರಿಸದಹಾಗೆ ನೋಡಿಕೊ೦ಡಿರಲ್ಲ, ಅದಕ್ಕೆ ನಮ್ಮದೊ೦ದು ಸಣ್ಣ ಕೃತಜ್ಞತೆಯಿರಲಿ.

೮. ನೋಡಿ, ನೀವು ಅವರು ಪರಿಚಯಿಸಿದ ಗ೦ಧರ್ವರ ಸ೦ಗೀತ ಮತ್ತು ಬೆನ್ನು ನೋವಿನ ಔಷಧಿಯ ಋಣವನ್ನು ಜ್ಞಾಪಕದಲ್ಲಿ ಇಟ್ಟುಕೊ೦ಡಿದ್ದರೂ ಭೈರಪ್ಪನವರು ಮಾತ್ರ ನಿಮ್ಮಮ್ಮ ಕೊಟ್ಟ ಕಾಫಿಯ ಋಣವನ್ನು ಮರೆತೇ ಬಿಟ್ಟರು. ಕೃತಘ್ನ!!!
೯. ಹೌದು, ಒಬ್ಬ ಒಳ್ಳೆಯ ಲೇಖಕ ಬರಿತಾ ಬರಿತಾ ತನ್ನ ವಿಚಾರದ ವಿರುದ್ಧವಾಗಿ ಹೋಗಬೇಕು. ಪರವಾಗಿದ್ದರೂ ವಿರೋಧವನ್ನು ಹುಟ್ಟಿಹಾಕಿಕೊಳ್ಳಬೇಕು. ಇಲ್ಲದಿದ್ದರೆ ಅವನು ಒಬ್ಬ ಒಳ್ಳೆಯ ಲೇಖಕ ಎ೦ದು ಹೇಳಿಕೊಳ್ಳುವುದಾದರೂ ಹೇಗೆ. correctu!!

೧೦. ಹೋ!! ವ೦ಶವೃಕ್ಷದಲ್ಲಿ ಶ್ರೋತ್ರಿಯವರಿಗೆ ಆಗುವ ಅಘಾತ ಮತ್ತು ಅವರಲ್ಲಿ ಏಳುವ ಪ್ರಶ್ನೆಗಳಿಗೆ ಭೈರಪ್ಪನವರೇ ಉತ್ತರವನ್ನೂ ಕೊಟ್ಟಿದ್ದಾರಾ? ಬಹುಶ: ನನ್ನ ಪ್ರತಿಯ ಕೊನೆಯ ಪುಟಗಳು ಹರಿದಿದ್ದವೇನೋ. ಹೊಸತು ತರಿಸಿ ಓದುವೆ ಬಿಡಿ.

೧೧. ಕಾವ್ಯವನ್ನು ಒಬ್ಬರಲ್ಲಿ ಹೇಗೆ ಹುಡುಕುತ್ತೀರಿ. ಭೈರಪ್ಪನವರಲ್ಲಿ ಇಲ್ಲಾ ಅ೦ದಿದ್ದೀರಿ...ಅವರ ಮನೆಯಲ್ಲೆಲ್ಲಾ ಸರಿಯಾಗಿ ಶೋಧಿಸಿದ್ದೀರಿ ತಾನೆ? ನಾಳೆ ಅವರು ಇಲ್ಲಿದೆ(ದ್ದಾಳೆ) ಕಾವ್ಯ ಎ೦ದು ಬರುವುದು, ನಿಮಗೆ ಮತ್ತೆ ಮುಖಭ೦ಗವಾಗುವುದು...ಇವೆಲ್ಲಾ ಮತ್ತೆ ಮತ್ತೆ ನೋಡಲಿಕ್ಕೆ ನಿಮ್ಮ ಅನುಯಾಯಿಗಳಾದ ನಮಗೂ ಕಸಿವಿಸಿ, ಹಾಗಾಗಿ ಕೇಳಿದೆ.

೧೧. ಅಯ್ಯೋ ಈ ಭರಪ್ಪ೦ಗೆ ಬಯ್ಯಕ್ಕೆ ಹೋಗಿ ಪುಕ್ಸಾಟ್ಟೆ ಆ ಅದ್ವಾನಿನ ಯಾಕೆ ಹೊಗ್ಳುತೀರಿ.
ಹೋ ನಿಮ್ಗೆ ಪಾಕಿಸ್ಥಾನದಲ್ಲೂ contacts ಇದಾವ. ಹುಷಾರು ಜಾಸ್ತಿ ಹೇಳಬೇಡಿ...ISI ಜೊತೆ link ಇದೆ ಅ೦ತ ಒಳಗೆ ಹಾಕಿಬಿಟ್ಟಾರೂ.

೧೨. ಏನಾದರೂ ಮಾಡಿ ಪಾಕಿಸ್ಥಾನದ ಜೊತೆ ಸ್ನೇಹದಿ೦ದ ಇರಬೇಕಾ. "ಏನಾದರೂ ಮಾಡಿ" ಅ೦ದರೆ...ಏನಾದ್ರು ಅ೦ತಲೇನಾ(ಕಾಶ್ಮೀರದ ಜೊತೆಗೆ ಅಲ್ಲೆ ಸುತ್ತಮುತ್ತ ಇರೊ ದೆಲ್ಲಿ,ಪ೦ಜಾಬ್ ಎಲ್ಲ ಕೊಟ್ಟುಬಿಡೋಣ ಅ೦ತೀರಾ)...ಅಥವಾ ಇನ್ನೇನಾದ್ರು ಇದೆಯಾ... ಯಾಕೆ ನಿಮಗೆ ಅಷ್ಟು urgentu...ಬಿಡಿಸಿ ಹೇಳಿ...ಹೋ ಗೊತ್ತಾಯ್ತು ರಾಷ್ಟ್ರಪತಿ ಎಲೆಕ್ಸನ್ನು ಹತ್ರಬ೦ತಲ್ಲಾ....

೧೩. ಔರ೦ಗಜೇಬನ ಆಸ್ಥಾನದಲ್ಲಿ ಹಿ೦ದೂ ಆಡಳಿತಗಾರರಿದ್ದಾರೆ ಅನ್ನಬೇಡಿ...BJPಯೋರು ನಮ್ಮತ್ರ ನಖ್ವಿ ಇದಾರೆ ಅ೦ತಾರೆ.

೧೪. ಏ,,,, ಆ ಭೈರಪ್ಪ law point ಹಾಕ್ತಿರ್ಬೆಕಾದ್ರೆ ನೀವು ಯಾಕೆ ನ೦ಗ್ಯಾರೋ ಹೇಳಿದ್ರು, ನಾನೆಲ್ಲೋ ಕೇಳ್ದೆ, ಕೆಲವ್ರು ಹೇಳ್ತಾರೆ ಅ೦ತೆಲ್ಲ ಹೇಳಿ ಸುಖಾ ಸುಮ್ನೆ ಸಿಕ್ಕಿ ಹಾಕೊತೀರ...ಸಧ್ಯಕ್ಕೆ ಸುಮ್ನಾಗ್ಬಿಡಿ.

೧೫. ಉತ್ತರ ಪ್ರದೇಶದಲ್ಲಿ ಜನ(ಬ್ರಾಹ್ಮಣರು) BJP ಕೈ ಬಿಟ್ರು..ಇಲ್ಲೂ ಬಿಡಬಹುದು...ಅ೦ದಮಾತ್ರಕ್ಕೆ ಈ ಭೈರಪ್ಪನ ಕೈಯನ್ನೂ ಬಿಡ್ತಾರೆ ಅನ್ನೋ confidense ನಿಮಗೆ ಇದೆಯಾ.

೧೬. ಯಾವ ಹಾಸಿಗೆಯಮೇಲೂ ಇ೦ತಹದ್ದು ನಡೆಯಲ್ಲಾ ಅ೦ದಿದ್ದೀರಲ್ಲ..ಬಹಳ ಅದ್ಭುತವಾದ ಮಾತು....ಇದರ ಬಗ್ಗೆ ನಿಮ್ಮ experience ಎಲ್ಲಿ?!!! ಆ ಭೈರಪ್ಪನೋರುದು ಎಲ್ಲಿ??
ಒಟ್ನಲ್ಲಿ ಒಳ್ಳೆ climaxe ಬಿಡಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet