ಅನರ್ಥಕೋಶ ೩

ಅನರ್ಥಕೋಶ ೩

ಬರಹ


ಉಗ್ರಾಣ-ರಾಜಕಾರಣಿಗಳ ಹೊಟ್ಟೆ
ಉಚ್ಛಾಟನೆ-ಮೂಲಪದ ಹುಚ್ಚಾಟ, ಅಪಭ್ರಂಶಗೊಂದು ಉಚ್ಚಾಟನೆ ಆಗಿದೆ. ಇದು ರಾಜಕೀಯ ಪಾರಿಭಾಷಿಕ ಪದ.
ಉತ್ತಮಾಂಗ-ಉತ್ತಮವಾದ+ಅಂಗ ಕಂಪ್ಯೂಟರ್. ಮೂಲತ: ಇದು ತಲೆ ಆಗಿತ್ತು. ಕಂಪ್ಯೂಟರ್ ಬಂದಮೇಲೆ ತಲೆ ಹೋಯ್ತು.
ಉತ್ತರ-ಪರೀಕ್ಷೆಗಳಲ್ಲಿ ಮಾಡುವ ಕಾಪಿಚೀಟಿ.
ಉತ್ತರಕ್ರಿಯೆ-ಕಾಪಿಚೀಟಿ ನೋಡಿ ಬರೆಯುವುದು.
ಉತ್ತರಾಧಿಕಾರಿ-ಪರೀಕ್ಷಾ ಕೊಠಡಿಯ ಹೊರಗೆ ನಿಂತು ಕಿಟಕಿಯಿಂದ ಉತ್ತರ ಬರೆದು ಕಳಿಸುವವ.
ಉತ್ತರಾಯಣ-ಕಾಪಿ ಮಾದುವಾಗ ವೀಕ್ಷಕರಿಗೆ ಸಿಕ್ಕಿಬಿದ್ದಾಗ ಆಗುವ ರಾದ್ಧಾಂತ.
ಉದಯ-ಟಿವಿ ಚಾನಲೊಂದರ ಹೆಸರು.
ಉದಾಸೀನ-ಆಲಸ್ಯ, ತಾತ್ಸಾರದಿಂದ ಕುಳಿತವ. ಉದಾ: ಕೆಲವು ಇಲಾಖೆಗಳ ನೌಕರರು.
ಉದ್ದಂಡ ನಮಸ್ಕಾರ-ವ್ಯರ್ಥವಾದ ನಮಸ್ಕಾರ.
ಉದ್ಯೋಗ-ಯೋಗಗಳಲ್ಲಿ ಒಂದು ಪ್ರಕಾರ.
ಉದ್ಯೋಗಸ್ಥ-ಯೋಗನಿದ್ರೆಯಲ್ಲಿರುವ ನೌಕರ.
ಉಪಕಥೆ-ಹೆಂಡತಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು.
ಉಪಗೃಹ-ಬಾಡಿಗೆ ಮನೆ
ಉಪಗ್ರಹ-ಬಾಡಿಗೆ ಮನೆಯ ಮಾಲೀಕ.
ಉಪಚಾರ-ಸೇವಕನ ಸೇವಕ(ಚಾರ-ಸೇವಕ).
ಉಪಜೀವನ-ಗಿಂಬಳದಲ್ಲಿ ಜೀವಿಸುವುದು.
ಉಪದೇಶ-ದೇಶಕ್ಕೆ ಸಂಬಂಧಿಸಿದ ಮತ್ತೊಂದು ದೇಶ. ಉದಾ: ಶ್ರೀಲಂಕಾ, ನೇಪಾಳ ಮುಂ.
ಉಪನದಿ-ಚರಂಡಿ, ಗಟಾರ.
ಉಸಿರುಕಟ್ಟು-ಉಸಿರನ್ನು ಕಟ್ಟಿಹಾಕುವುದು. ಉದಾ:ಬಲೂನಿನಲ್ಲಿ ಉಸಿರನ್ನು ಕಟ್ಟಿ ಹಾಕುವುದು.
ಉರುಲು-ನಮ್ಮ ಮನೆಯಲ್ಲಿರದ ಆದರೆ ಪಕ್ಕದ ಮನೆಯಲ್ಲಿರುವ ವಸ್ತುಗಳು. ಉದಾ: ಸೀರೆ, ಫ್ರಿಜ್, ವಾಶೀಂಗ್ ಮಶೀನ್ ಮುಂ.

ಊಟ-ಆಟದ ನಂತರ ಬರುವ ಶಬ್ದ.

ಏಕತೆ-ಏ+ಕತೆ ವಯಸ್ಕರು ಕೇಳುವ ಕತೆ
ಏಕಪತ್ನೀವ್ರತ-ಮೂಲಪದ ಏಕೆ ಪತ್ನೀವ್ರತ? ಗ್ರಾಮ್ಯ ಭಾಷೆಯಲ್ಲಿ ಏಕಪತ್ನೀವ್ರತ.

ಒಕ್ಕಣ್ಣು-ಕಣ್ಣು ಹೊಡೆಯುವವ
ಒನಕೆ-ಹೆಂಗಸರ ಆಯುಧ. ಆಯುಧ ಪೂಜೆ ಹಬ್ಬದಲ್ಲಿ ಇದನ್ನು ಪೂಜೆ ಮಾಡುವರು.

ಓಜ-ಓದಿಂದ ಜನಿಸಿದ್ದು. ಔ.
-ಸಿದ್ಧರಾಮ ಹಿರೇಮಠ.