ಅನರ್ಹ ಪಕ್ಷೇತರರು
ಪ್ರಜಾಪ್ರಭುತ್ವದಲ್ಲಿ ಶಾಸಕಾಂಗವೇ ಸುಪ್ರೀಂ: ಶಾಸನಸಭೆಯಲ್ಲಿ ಸ್ಪೀಕರ್ ಹುದ್ದೆಯದು ಪರಮಾಧಿಕಾರ. ಹೈಕೋರ್ಟ್ ಸಹ ಇದನ್ನು ಎತ್ತಿ ಹಿಡಿದಿದೆ. ಇದು ಕಾಯ್ದೆ-ಕಾನೂನಿನ ಮಟ್ಟಿಗೆ ಸತ್ಯ. ಆದರೆ ಈ ಸನ್ನಿವೇಶ ಆದರ್ಶಮಯ Cliché ಆದೀತೇ ವಿನಃ ಹೊರತು ವ್ಯವಹಾರದಲ್ಲಿರುವಂಥದಲ್ಲ. ಇದು ಸಾಮಾನ್ಯ ಪ್ರಜ್ಞೆಗೂ ಗೊತ್ತಾಗುತ್ತಿರುವ ಸತ್ಯ! ನಿಜವಾಗಿ ಪ್ರಜಾಪ್ರಭುತ್ವವೆಂಬುದು ಜನ, ಜನರಿಂದ, ಜನರಿಗಾಗಿ ನಡೆಸುವ ಆಡಳಿತ ವ್ಯವಸ್ಥೆಯೇ ಆಗಿದ್ದರೆ, ಅದಕ್ಕೆ ಕಾನೂನು ಮಾತ್ರವೇ ಅಲ್ಲ, ಮನುಷ್ಯತ್ವದ ಆತ್ಮಸಾಕ್ಷಿ ಮತ್ತು ನೀತಿಗಳ ತಳಹದಿಯೂ ಬೇಕಾಗುತ್ತದೆ. ಅದೀಗ “ಸಮಾಜಸೇವೆ” ಎಂಬ “ದಂಧೆ”ಯಲ್ಲಿ ಎಳ್ಳಷ್ಟೂ ಇಲ್ಲ!
ಪಕ್ಷೇತರರೆಂಬುವವರಿಗೆ ನಿಜವಾಗಿ ಸ್ವಂತದ ತತ್ತ್ವ-ಸಿದ್ಧಾಂತವಾದರೂ ಎಲ್ಲಿಯದು? ಮಾತೃ ಪಕ್ಷ ಟಿಕೆಟ್ ಕೊಡದಿದ್ದರೆ ಅದಕ್ಕೆ ಸೆಡ್ಡು ಹೊಡೆದು ನಿಲ್ಲುತ್ತಾರೆ; ಬೇರೆ ಅಭ್ಯರ್ಥಿಗಳಿಗೆ ತಲೆನೋವು ತರಲು ಮುಖ್ಯ ರಾಜಕೀಯ ಪಕ್ಷಗಳಿಂದ ಕುಮ್ಮಕ್ಕು ಪಡೆದ ಕಿರುಕುಳಕಾರರೂ ಸಾಕಷ್ಟಿರುತ್ತಾರೆ; ಚುನಾವಣೆ ಕಾಲದಲ್ಲಿ ನಾಲ್ಕು ಕಾಸು ಮಾಡಿಕೊಳ್ಳಲು, ತಾತ್ಕಾಲಿಕವಾಗಿ ಸಿಗುವ Privilageಗಳನ್ನು ಮಾರಿಕೊಳ್ಳುವ ಉದ್ಯಮಶೀಲರೂ ಈ ಪೈಕಿ ಇರದಿಲ್ಲ! ಒಮ್ಮೊಮ್ಮೆ ಒಬ್ಬಿಬ್ಬರು ಆದರ್ಶಕ್ಕೆ ನಿಂತುಕೊಂಡರೂ ಅವರು ಪಡೆಯುವುದು ಹತ್ತಿಪ್ಪತ್ತು ವೋಟುಗಳಿಗಿಂತಾ ಹೆಚ್ಚಿರುವುದಿಲ್ಲ! ಇಂಥಾ ಪಕ್ಷೇತರರು ಸೋತರೆ ಕಳೆದುಕೊಳ್ಳುವುದೇನೂ ಇರುವುದಿಲ್ಲ; ಗೆದ್ದರೆ ವೀರ ಸ್ವರ್ಗಕ್ಕಿಂತಾ ದೊಡ್ಡ ಪದವಿ ಕಾದು ನಿಂತಿರುತ್ತದೆ; ತ್ರಿಶಂಕು ಸಭೆಗಳಲ್ಲಿ ಪಕ್ಷೇತರರು ತಾನೇ ರಾಜೋತ್ಪಾದಕರು - King-makers!
ನಮ್ಮ ನಾಯಕಮಣಿಗಳು, ಕಾನೂನಿನ ಕೂದಲೆಳೆಯಲ್ಲಿ ಕುತ್ತಿಗೆ ಕೊಯ್ಯುವ ಚಾಣಾಕ್ಷತನಕ್ಕಿಂತಾ, ಮನುಷ್ಯರಿಗಿರಬೇಕಾದ ಮೂಲಭೂತ ಆತ್ಮಾಸಾಕ್ಷಿ ಪ್ರಜ್ಞೆ ಬೆಳೆಸಿಕೊಳ್ಳುವವರೆಗೆ ಇಂಥಾ ಕಿರಿಕ್ಗಳು ತಪ್ಪಿದ್ದಲ್ಲ!
Comments
ಉ: ಅನರ್ಹ ಪಕ್ಷೇತರರು
In reply to ಉ: ಅನರ್ಹ ಪಕ್ಷೇತರರು by asuhegde
ಉ: ಅನರ್ಹ ಪಕ್ಷೇತರರು
ಉ: ಅನರ್ಹ ಪಕ್ಷೇತರರು