ಅನಾದಿ
ಅನಾದಿ
ರಸ್ತೆ ಬದಿಯಲ್ಲಿ ಮಲಗಿದವರನು ಕೊಂದವರಿಗೆ ಶಿಕ್ಷೆ ಕೊಡಿಸಲು/ತಗ್ಗಿಸಲು ಹೆಣಗಾಡುವ ಹಣದಲ್ಲಿ, ಉಳಿದ ರಸ್ತೆ ಬದಿಯವರಿಗೆ ಒಂದೊಂದು ಸುಂದರ ಜೋಪಡಿ ಕೊಡಿಸಬಹುದಿತ್ತು ಎನ್ನುವುದು ಯಾರೂ ಅರ್ಥ ಮಾಡಿಕೊಳ್ಳದ ಸತ್ಯ,,,,
**************************************************
ದಿನವೂ ದುಡಿಯುವ ಸಮಯದಲ್ಲಿ, ಉಳಿಯುವ ಅಷ್ಟೂ ಇಷ್ಟೂ ಭಾವಗಳನ್ನು ಅವಳೊಂದಿಗೆ ಹಂಚದೆ ಇದ್ದರೆ ಆತನಿಗೆ ನಿದ್ರೆಯೇ ಬರುತ್ತಿರಲಿಲ್ಲ,,,,,, ಅವಳೊಂದಿಗೆ ಕಳೆದ ಎಲ್ಲಾ ಕ್ಷಣಗಳೂ ಅವನಿಗೆ ವಿಶೇಷವಾಗಿಯೇ ಇರುತ್ತಿತ್ತು,,,,,,, ಮೊನ್ನೆ ಆಕೆ ನಾಪತ್ತೆ, ಅವನ ಕನಸುಗಳನ್ನು ಕದ್ದೊಯ್ದಿರಬಹುದೆಂದು ಶಂಕೆ ಇದೆ,,,,,,
**************************************************
ಜಗಕ್ಕೆಲ್ಲ ಬೆಳಕು ಕೊಡುವ ಸೂರ್ಯ ಕತ್ತಲೆಗೆ ಯಾಕೆ ಹೆದರಿ ಓಡಿಹೋಗುತ್ತಾನೆ ಎನ್ನುವ ಪುಟ್ಟ ಮಗಳ ಪ್ರಶ್ನೆಗೆ, ಅಮ್ಮ,,,, ಅಪ್ಪನ ಮುಖ ನೋಡಿದ್ದರಲ್ಲಿ ತಪ್ಪೇನಿದೆ ??
**************************************************
ಬೆಂಕಿಯ ಮಧ್ಯದ ತಂಪಿಗೆ ಯಾವಾಗಲು ಹಂಬಲಿಸಿದಾಕೆ,,,,,, ಇಂದು ಇಲ್ಲಿ ಹೆಣ್ಣಾಗಿ ಹುಟ್ಟಿದ್ದಾಳೆ,,,,,,,
**************************************************
ಮೋಡದ ಒಳಗೆ ಮಳೆಹನಿಗಳನು ಅಡಗಿಸಿದ್ದಾರು? ಎನ್ನುವ ಪ್ರಶ್ನೆ ಅವನಲ್ಲಿ ಸದಾ ಕಾಡುತ್ತಿತ್ತು,,,,,, ಅವನ ಹೆಂಡತಿಗೆ ಎಂಟು ತಿಂಗಳು ತುಂಬುವಷ್ಟರೊಳಗೆ ಅದು ಅವನಿಗೆ ಅರ್ಥವಾದಂತಿತ್ತು,,,,
**************************************************
ಮೇಲಿನ ಮನೆಯ ಮಕ್ಕಳ ಬೆಳವಣಿಗೆ ಚೆನ್ನಾಗಿ ಗೊತ್ತಾಗುವುದು, ಕೆಳಗಿನ ಮನೆಯವರಿಗೆ ಮಾತ್ರ,,,,
**************************************************
ನಗರದಲ್ಲಿ ಎಲ್ಲವೂ ಇದೆ,,,,,, ಬದುಕೊಂದನ್ನು ಬಿಟ್ಟು,,,,,
**************************************************
ನಿಮ್ಮ ಹೆಂಡತಿಯನ್ನು ನೀವು ಇನ್ನಷ್ಟು ಪ್ರೀತಿಸಬೇಕೆ ???? ,,,,,,,,,,,,,,,,,,,, (ಉತ್ತರ ಅನುಭವಕ್ಕೆ ಮೀರಿದ್ದು)
-ಜೀ ಕೇ ನ
Comments
ಉ: ಅನಾದಿ
ಚುಟುಕುಗಳು ಅರ್ಥವತ್ತಾಗಿವೆ. :)
In reply to ಉ: ಅನಾದಿ by kavinagaraj
ಉ: ಅನಾದಿ
ಪ್ರತಿಕ್ರಿಯೆಗೆ ಧನ್ಯವಾದಗಳು ಕವಿಗಳೇ