ಅನಾನಸು ಹಲ್ವ

ಅನಾನಸು ಹಲ್ವ

ಬೇಕಿರುವ ಸಾಮಗ್ರಿ

ಅನಾನಸು ಹೋಳು ೪ ಕಪ್, ಸಕ್ಕರೆ ೨ ಕಪ್, ತುಪ್ಪದಲ್ಲಿ ಹುರಿದ ಗೋಡಂಬಿ ೨ ಚಮಚ, ದ್ರಾಕ್ಷಿ ೨ ಚಮಚ, ಏಲಕ್ಕಿ ಪುಡಿ ೧ ಚಮಚ, ತುಪ್ಪ ೪ ಚಮಚ, ಕೇಸರಿ ೨ ಎಸಳು.

ತಯಾರಿಸುವ ವಿಧಾನ

ಅನಾನಸು ಹೋಳುಗಳನ್ನು ಸ್ವಲ್ಪ ತರಿತರಿಯಾಗಿ ರುಬ್ಬಿ. ಬಾಣಲೆಯಲ್ಲಿ ರುಬ್ಬಿದ ಅನಾನಸು, ಸಕ್ಕರೆ ಹಾಕಿ ಕುದಿಸಿ ಮಗುಚಿ. ತುಪ್ಪ, ಗೋಡಂಬಿ, ದ್ರಾಕ್ಷಿ, ಕೇಸರಿ ಹಾಕಿ ಚೆನ್ನಾಗಿ ಮಗುಚಿ. ಬಿಸಿಬಿಸಿ ತಿನ್ನಲು ರುಚಿ. ತಣ್ಣಗೆ ತಿನ್ನಲೂ ರುಚಿಯಾಗಿರುತ್ತದೆ.

- ಸಹನಾ ಕಾಂತಬೈಲು, ಮಡಿಕೇರಿ