ಅನಿವಾರ್ಯತೆ

ಅನಿವಾರ್ಯತೆ

ಕವನ

 

'ಕಣ್ಣಲ್ಲಿ ನೀರೇಕೆ,
ನಿನ್ನ ತವರಿನ ನೆನಪೆ?'
ಇವ ನನ್ನವ ಕೇಳಿದ್ದ...
ಇಲ್ಲವೆನ್ನಲು ನೆಪ ಸಿಗದೆ 
ಹೌದೆಂದೆ...
ಏಕೆಂದರೆ 
ಇವನ ಮನೆಯಲ್ಲಿ 
ಈರುಳ್ಳಿ ನಿಷಿದ್ಧ.   
-ಮಾಲು