ಅನುಕಂಪ
ಕವನ
ಮೆಲ್ಲಮೆಲ್ಲನೆ ಚಿಗುರಿ ತಲೆಯೆತ್ತಿ ನಿಂತಿದ್ದ
ಹಸುರೆಲೆಯ ಗಿಡಕೊಂದು ಕಲ್ಲು ಬಿತ್ತು
ಆಘಾತದಿಂದ ಕುಂದಿದ ಸಸ್ಯ ನೋವಿಂದ
ತನ್ನೊಂದು ಶಾಖೆಯನು ಬಲಿಯಿತ್ತಿತು 1
ಕೊಂಬೆಯಿಲ್ಲದ ಗಿಡವ ನೋಡಿ ಕನಿಕರದಿಂದ
ಕಣ್ಣಿಂದ ಜಲ ಸುರಿಸುವವರೇ ಎಲ್ಲ
ಅನುಕಂಪ ಜಲಕಿಂತ ತಂಪಾದ ನೀರನ್ನು
ಹನಿಹನಿಸೆ ಉಪಕಾರ ಕಡಿಮೆಯಲ್ಲ 2
ಬಿಸಿಬಿಸಿಯ ಕಣ್ಣೀರು ನೋಡಿ ನಲುಗುತ ಕೊರಗಿ
ಬೆಂದು ಹೋಯಿತು ಸಸಿಯ ಕೋಮಲಾಂಗ
ಎದುರಿನಲಿ ಕನಿಕರಿಸೆ ಮರುಗದೇ ಮರದ ಮನ?
ಎಂದು ಕೂಗಿತು ಮನದ ಪಕ್ಷಿಯಾಗ! 3
Comments
ಉ: ಅನುಕಂಪ
In reply to ಉ: ಅನುಕಂಪ by Gonchalu
ಉ: ಅನುಕಂಪ
ಉ: ಅನುಕಂಪ