ಅನುಕರಣೆ
ಕವನ
ಅಧರದೊಳಿಹುದಯ್ಯ
ಸವಿ ಜೇನು ಸುಧೆಯು.
ಗುದದ್ವಾರದಲಿ ಬಯಸೆ
ಅದು ದೊರೆವುದೇ?
ಉದಿಪ ರವಿಕಿರಣಗಳು
ಮೈಸೋಕೆ ಒಳಿತಹುದು.
ಸುಡು ಬಿಸಿಲ ಸಂಗವದು
ಹಿತವಪ್ಪುದೇ?
ಸಿಂಗನಂತಿರಲೆಂದು
ಕೇಸರಿಯ ಒಡನಾಡೆ
ಕಾಲನನೆ ಅರಸಿದಾ
ಪರಿಯಲ್ಲವೇ?
ಭೋಜರಾಜನ ಧ್ವನಿಯು!
ನವೀನ್ ಪಡಿಲ್ ನ ನಡೆಯು!!
ನಿನದಾದ ವ್ಯಕ್ತಿತ್ವ ನಿನಗಿಲ್ಲವೇ?
ನೀನು 'ನೀನಾದಾಗ'
ನಿನಗೆ ದೊರಕುವ ಮಾನ
ಅನ್ಯರನು ಅನುಕರಿಸೆ
ಅದು ಬರುವುದೇ?
ಕೂಡಿ ಬಾಳುವ ಗೆಳೆಯ
ರಾಗ ದ್ವೇಷವ ಮೆಟ್ಟಿ
ಇರಲಿ ಸ್ವಂತಿಕೆ ನಮಗೆ
ತನು ಮನದಲೀ
Comments
ಉ: ಅನುಕರಣೆ
ತುಂಬಾ ಇಷ್ಟವಾಯ್ತು. 'ನನ್ನತನ'ವೆಂಬುದು ಬಹು ಮುಖ್ಯ ಯಾವ ವ್ಯಕ್ತಿಗಾದರೂ, 'ಅನುಕರಣೆ' ಎಂದಿಗೂ ಸಲ್ಲ.