ಅನುತ್ತೀರ್ಣತೆಯಿಂದ ಬಂಗಾರದ ಪದಕಗಳವರೆಗೆ

ಅನುತ್ತೀರ್ಣತೆಯಿಂದ ಬಂಗಾರದ ಪದಕಗಳವರೆಗೆ

ಬರಹ

ಪರೀಕ್ಷೆಯಲ್ಲಿ ಫೇಲಾಗಿ ವಿದ್ಯಾಭ್ಯಾಸವನ್ನೇ ಬಿಟ್ಟವರು ಹಲವರು, ಜೀವವನ್ನೇ ಬಿಟ್ಟವರು ಇನ್ನು ಕೆಲವರು. ಒಂದೇ ಪರೀಕ್ಷೆ ಪಾಸಾಗಲು ೪ ವರ್ಷ ತೆಗೆದುಕೊಂಡವನು ಏನು ಮಾಡಬೇಕು? ತಾಳ್ಮೆಯಿದ್ದವನಾದರೆ, ಮರಳಿ ಯತ್ನವ ಮಾಡು ಎಂದು ನಂಬುವನಾದರೆ ಮತ್ತೊಮ್ಮೆ ಪರೀಕ್ಷೆ ಬರೆಯಬಹುದು, ಈ ರೀತಿ ಪಿ.ಯು.ಸಿ ದ್ವಿತೀಯ ವರ್ಷ ಮುಗಿಸಿದ ಆಳಂದ ತಾಲೂಕಿನ ಸಿದ್ಧರಾಮ ಪಾಟೀಲ್ ನಿನ್ನೆ ಗುಲ್ಬರ್ಗಾ ವಿಶ್ವವಿದ್ಯಾಲಯದ ೨೭ನೇ ಘಟಿಕೋತ್ಸವದಲ್ಲಿ ೭ ಬಂಗಾರದ ಪದಕಗಳನ್ನು ಪಡೆದುಕೊಂಡರು. ಎಮ್.ಎಸ್ಸಿ(ಗಣಿತ)ದಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದಕ್ಕೆ ಈ ಪದಕಗಳನ್ನು ಪಡೆದರು.


ಪಿ.ಯು.ಸಿ ದ್ವಿತೀಯ ವರ್ಷದ ಪರೀಕ್ಷೆ ಪಾಸಾಗಲು ೬ ಸಲ ಪರೀಕ್ಷೆ ಬರೆದ ಇವರು ಗಣಿತದಲ್ಲಿ ಚುರುಕಾಗಿದ್ದರು ಆದರೆ ಬೇರೆ ವಿಷಯಗಳಲ್ಲಿ ಅಷ್ಟೇ ಮಂದವಾಗಿದ್ದರು. ಆಳಂದ ತಾಲೂಕಿನ ಧಣ್ಣೂರಿನ ಇವರು ಬಿಎಸ್ಸಿಯಲ್ಲೂ ಸ್ವರ್ಣ ಪದಕ ಪಡೆದಿದ್ದರು. ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಬೇಕೆನ್ನುವದು ಇವರ ಇಚ್ಛೆ.