ಅನುಬಂಧ

ಅನುಬಂಧ

ಕವನ

ಬಂಧ ಬಂಧದಲಿ ಅನುಬಂಧ

ಭಾವದ ಬೆಸುಗೆಯ ಸಂಬಂಧ

ಬೆಸೆದ ಕೊಂಡಿಯಲಿ ಈ ಬಂಧ

ಭವ ಸಾಗರದಲಿ ರಾಗಾನುಬಂಧ.

 

ಭೂರಮೆ ಮಡಿಲಿನ ಮಕ್ಕಳು ನಾವು

ಹರಡಿ ಬೆಳೆದ ಬಳ್ಳಿಯ ‌ಹೂಗಳು ನಾವು

ಬಾಂಧವ್ಯವು ಅರಳಿದ ಹೊಸ ಬಗೆಯಲ್ಲಿ

ಪ್ರೀತಿ, ಪ್ರೇಮ, ವಿಶ್ವಾಸದ ಅಲೆಯಲ್ಲಿ

 

ನೆತ್ತರು ಹಂಚಿದ ಈ ಬಂಧನವು

ಅಣ್ಣ, ತಂಗಿ, ಅಕ್ಕ, ತಮ್ಮರ ಸಂಬಂಧವು

ಭಾತೃತ್ವದ ಬೆಸುಗೆಯ ಹೊಸ ರಾಗದಲಿ

ಬೆಳಕಿನ, ಬೆರಗಿನ ಬಾಳದು ನಮಗಿಲ್ಲಿ.

 

ಶ್ರಾವಣ ಮಾಸದ ಪೌರ್ಣಿಮೆಯಂದು

ರಕ್ಷಾ ಬಂಧನ ಭಾಗ್ಯವು ನಮಗೆಂದೂ

ಸೋದರ- ಸೋದರಿಯರು ಸಂಭ್ರಮದಲ್ಲಿ

ಸಂಸ್ಕೃತಿ,ಸಂಸ್ಕಾರದ ಸಾರವಿಹುದಿಲ್ಲಿ.

-ವೀಣಾ ಕೃಷ್ಣಮೂರ್ತಿ, ದಾವಣಗೆರೆ

 

ಚಿತ್ರ್