ಅನುಭವಗಳ ಹೂರಣ
ಕವನ
ವಿಶ್ವ ಪ್ರವಾಸೋದ್ಯಮ ದಿನ ವಿಶೇಷವಿಂದು
ದೇಶ ಸುತ್ತು ಕೋಶ ಓದು ಎಂದರು ಹಿರಿಯರಂದು
ಅನುಭವಗಳ ಹೂರಣ ನೋಟಗಳ ತೋರಣ
ಕಣ್ಮನ ಸೆಳೆಯುವ ಪ್ರಾಕೃತಿಕ ಸೌಂದರ್ಯ ತಾಣ
ಜೀವ ಜಗತ್ತಿನ ಆಗುಹೋಗುಗಳ ಮಹತ್ವದರಿವು
ಸಾಮಾಜಿಕ ಸಾಂಸ್ಕೃತಿಕ ವೈಭವದ ತಿಳಿವು
ನಿಸರ್ಗದ ಮಡಿಲ ಅದ್ಭುತ ಹರಿವು
ಅಂತರಾಷ್ಟ್ರೀಯ ವ್ಯವಹಾರಗಳ ಪರಸ್ಪರ ನೆರವು
ಜೀವನ ಶೈಲಿಯಲಿ ಒಂದಷ್ಟು ಕಲಿಕಾ ಹಂದರ
ನವನವೀನ ಸಂದೇಶಗಳ ಹೊತ್ತ ಮಂದಿರ
ರಾಷ್ಟ್ರದ ಆರ್ಥಿಕತೆಯ ಎತ್ತರಿಸುವ ಸಾಧನ
ಕಲಾಕುಸುರಿಯ ಮೋಹಕ ಅನಾವರಣ
ವೈವಿಧ್ಯ ಭಾಷೆಗಳು ವೇಷಭೂಷಣಗಳು
ಉದ್ಯೋಗ ಸೃಷ್ಟಿಗೆ ಕಾರಣವಾಗಲು
ವಿಶ್ವ ಬಂಧುತ್ವ ಸಾಮರಸ್ಯ ಬೆಸೆಯಲು
ದೇಶದ ಆರ್ಥಿಕ ಪ್ರಗತಿ ಹೆಚ್ಚಾಗಲು
ಮನರಂಜನೆಯ ಜೊತೆಗೆ ಆರೋಗ್ಯ ವರ್ಧನೆ
ಉಲ್ಲಾಸ ಉತ್ಸಾಹ ಇಮ್ಮಡಿಯಾಗುವುದು
ಬದುಕಿನ ಹಾದಿಯ ಸಾರ್ಥಕತೆ ಪ್ರವಾಸದಿಂದ
ನೋವು ನಲಿವುಗಳ ಸಂಗಮ ಸಂಭ್ರಮವು
-ರತ್ನಾ ಕೆ ಭಟ್,ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್