ಅನುರಾಗ ಗೀತೆ
ಕವನ
ಗಾಳಿಯಲಿ ಹಾಡಾಗಿ ಕರಗುವ ಭಾವ
ನಿನ್ನೊಲವ ನೋಟದಲಿ ಕಳೆದೆ ನೋವ
ಬೇಕಿದೆ ಪದಗಳು ಬಣ್ಣಿಸಲು ನಲಿವ
ಒಲವಲಿ ಕವಿಯಾಗಿ ಗೀಚಿದೆ ಪದವ.
ವಸಂತ ಒಲಿದ ಚಿಗುರ ಒಲವು
ಚಿಗರೆಯ ತರದಲಿ ಜಿಗಿತದ ಗೆಲುವು
ಏನಿದು ಸಾವಿಭಾವ ಬೆಳಕ ಹೊನಲು
ಸವಿಗನಸ ಕಂಡೆ ನೀ ನಗಲು.
ನಿನ್ನ ಬಿಂಬವ ಬಯಸಿದೆ ಕಂಗಳು
ಕಾದಿದೆ ಹಂಬಲಿಸಿ ಹಗಲು-ಇರುಳು
ಬಿಡು ನೆರಳ ನನ್ನದೇ ಬಳಿಯಲಿ
ಬೇಸರಿಸಿದೆ ಕಾಯ್ವೆ ಹೊನ್ನ ಹೆಸರಲಿ.
ಸಿಂಗರದ ಹಂಗಿಲ್ಲ ಚೆಲುವ ಒಡತಿ
ಚೆಂದದ ಶಶಿಯೇ ಆಗಿಹ ಮೂಗುತಿ
ತಾರೆಗಳ ತೇರಲಿ ನಿನ್ನ ತೂಗುತಾ
ಭುವಿಯ ದಾಟಿ ಬೆಳೆವೆ ಹಿಗ್ಗುತಾ.
ಭಾವಗಳು ಸೇರಲು ಕಾದಿದೆ ಕಾಲ
ವಿರಮಿಸದೇ ಸುಳಿಯಲಿ ಸಕಾಲ
ಒಲವು ರಂಗೇರಿಸಲಿ ಬಾನನು
ಹರಸಲಿ ದೇವ ನವಗನಸನು.
-ನಿರಂಜನ ಕೇಶವ ನಾಯಕ, ಮಂಗಳೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
