ಅನುವಾವಿ ಸುಬ್ರಹ್ಮಣ್ಯ ದೇಗುಲ
ಕವನ
ಇಲ್ಲಿದೆ ಷಣ್ಮುಖ ದೇವಾಲಯ
ಅನುವಾವಿಯಲ್ಲಿರುವ ಕಾರ್ತಿಕೇಯ
ಬಹುದೊಡ್ಡ ಬೆಟ್ಟದ ತುದಿಯಲ್ಲಿ ನಿಂತ
ಶ್ರೀ ಸುಬ್ರಹ್ಮಣ್ಯನ ದರ್ಶನವೆ ಭಾಗ್ಯ/
ಸುತ್ತಲೂ ಹಸಿರು ಸಿರಿ ಆಹ್ಲಾದವಿಲ್ಲಿ
ಶ್ರೀ ಸ್ವಾಮಿ ಕುಳಿತಿಹನು ಬೆಟ್ಟದಾ ತುದಿಯಲ್ಲಿ
ಮೆಟ್ಟಿಲನು ಏರುತ್ತ ತುದಿ ಸೇರಬೇಕು
ಮನದೊಳಗೆ ಬತ್ತದಿಹ ಭಕ್ತಿ ಇರಬೇಕು/
ಸಂಜೀವಿನಿ ಬೆಟ್ಟ ಹೊತ್ತಿರಲು ಹನುಮ
ಗಗನದಲಿ ಸಂಚಾರ ಅವಸರದ ಯಾನ
ಬಾಯಾರಿ ಬಳಲಿರಲು ಬೇಡಿದನು ಹನುಮ
ಶ್ರೀ ಕುಮಾರ ಸ್ವಾಮಿಯನು ಜಪಿಸುತ್ತ ಜಲವ/
ಷಣ್ಮುಖನು ಆಯಧವ ನೆಲಕೊಮ್ಮೆ ಕುಕ್ಕಿ
ಚಿಮ್ಮಿತದೊ ಜೀವಜಲ ಬಾನತ್ತ ಉಕ್ಕಿ
ಜಲ ಕುಡಿದು ಸಂತೃಪ್ತ ಗೊಂಡಿರಲು ಹನುಮ
ಅವ ಮುಂದುವರಿಸಿದನು ಲಂಕೆಯೆಡೆ ಯಾನ/
-ಪೆರ್ಮುಖ ಸುಬ್ರಹ್ಮಣ್ಯ ಭಟ್
(ಚಿತ್ರ ಅವಿನಾಶ್ ನಿಡುಗಳ ಅವರ ವಾಲ್ ನಿಂದ)
ಚಿತ್ರ್