ಅನ್ನದಾತನೇ

ಅನ್ನದಾತನೇ

ಕೈಗಂಟಿದ ಒರಟು ಚರ್ಮ,
ಮೈಮೇಲಿನ ಬೆವರ ಕಮುಟು,
ಹರಿದ ಅಂಗಿ, ತರಿದ ಪಂಚೆ,
ಇವೇ ಅಡಿಪಾಯ,
ನಾ ಗಡದ್ದಾಗಿ ತಿಂದು ತೇಗುವ ಅನ್ನಕ್ಕೆ

ಕಪಾಳಕ್ಕೆ ಬಾರಿಸುವವರಿಲ್ಲ ನನಗೆ,
ಅನ್ನ ಕೊಡುವವನ ಕನಸು ಕಸಿದ್ದಿದ್ದಕ್ಕೆ.
ತಿಳಿ ಸಾರು, ಗಟ್ಟಿ ಮೊಸರು
ಕಲಸಿ ತಿಂದು,
ಕೊಟ್ಟವನನೇ ಮರೆತು,
ಓಡಿಸಿದ, ದೇಶದ ಚಾಕರಿ ಮಾಡುವ
ನನಗೆಂತ ಮರ್ಯಾದೆ?

ಕೆಂಪು ಸೂರ್ಯನ ಉರಿಯಲ್ಲೇ
ಉತ್ತಿ ಬಿತ್ತಿ, ಬೆಳೆದು
ಎದೆಗೆ ಅವುಚಿ ತಂದ ಬತ್ತ,,,,
ದಾರಿಯಲ್ಲೇ ಮಂಗಮಾಯ,
ಬಡತನದ ಹೊಟ್ಟೆ ಹೊರೆಯಲು,,,

ಒಂದು ಕಾಳೂ ಅನ್ನವನೂ
ನೀಡಲಾಗದ ನನ್ನಂತವನಿಗೆ
ಎಲ್ಲಿದೆ ತಿನ್ನುವ ಹಕ್ಕು ??

– ಜೀ ಕೇ ನ