ಅನ್ನದಾತನ ಬವಣೆ

ಅನ್ನದಾತನ ಬವಣೆ

ಕವನ

ಸಾಲದ ಶೂಲವದು ಶಿರವನು

ತುಳಿಯುತಿದೆ ದೇವ|

ಹನುಮನ ಬಾಲದಂತೆ ಬಡ್ಡಿಯು

ಬೆಳೆಯುತಿದೆ ದೇವ||

 

ಬಿತ್ತಿದ ಕಾಳದು ನೀರುಕಾಣದೆ

ಒಣಗಿಹೋಗಿವೆ|

ಕಂಗಳದು ಎತ್ತರದ ಪೈರನು

ನೆನೆಯುತಿದೆ ದೇವ||

 

ಬರಗಾಲದಿ ಒಪ್ಪತ್ತಿನ ಊಟಕ್ಕೂ

ಗತಿಯಿಲ್ಲದಂತಾಗಿದೆ |

ಹೃದಯದ ಆಳದಲಿ ದುಃಖವು

ಕೊರೆಯುತಿದೆ ದೇವ||

 

ಭೂತಾಯಿಗೆ ಹಸಿರಿನ ಮೈಸಿರಿಯ

ಭಾಗ್ಯವಿಲ್ಲ|

ಉಸಿರಲ್ಲಿ ಸೋತು ಸೊರಗುತ

ಸೆಳೆಯುತಿದೆ ದೇವ||

 

ಅನ್ನದಾತನ ಬದುಕಿನ ಬವಣೆಯ

ಕೇಳುವವರಿಲ್ಲ |

ಅಭಿನವನ ಮನ ನೊಂದು

ಮಿಡಿಯುತಿದೆ ದೇವ||

 

-ಶಂಕರಾನಂದ ಹೆಬ್ಬಾಳ 

 

ಚಿತ್ರ್