ಅನ್ನದಾತರನು ರಕ್ಷಿಸು

ಅನ್ನದಾತರನು ರಕ್ಷಿಸು

ಕವನ

ದಿನಕರನ ಹೊಂಬಣ್ಣ ಮೆಲ್ಲನೇರಲು

ಕಾನನದಿ ಹಕ್ಕಿಗಳ ಕಲರವ ಕೇಳಿಸಲು/

ಹಟ್ಟಿಯ ಕಾಯಕವ ನಿಷ್ಠೆಯಲಿ ಪೂರೈಸಲು

ಕಟ್ಟಿ ಬುತ್ತಿಯ ಗಂಟು ಶಿರದ ಮೇಲಿರಿಸಲು//

 

ನೊಗ ನೇಗಿಲ ಹೆಗಲಲಿ ಹೊರುತ

ಹೊಲದತ್ತ ನಡೆದು ಹಸನು ಮಾಡುತ/

ಕಳೆಗಳ ಕೊಚ್ಚಿ ಹರವಿ ಗೊಬ್ಬರ ಹಾಕುತ

ಬೀಜ ಬಿತ್ತಿ ಬೆವರಿಳಿಸಿ ದುಡಿಯುತ//

 

ಫಲತುಂಬಿ ತೆನೆಬಾಗಲು ಹರ್ಷಿಸುತಲಿರಲು

ಅಯ್ಯಯ್ಯೋ ಅಕಾಲದಿ ವರ್ಷಾಧಾರೆ ಸುರಿಯಲು/

ಕಷ್ಟ ಪಟ್ಟುದೆಲ್ಲ ಜಲದ ಪಾಲಾಗಲು

ಅನ್ನದಾತನ ಗೋಳು ಕೇಳುವವರಾರಿಲ್ಲದಿರಲು//

 

ಬಿಸಿಲ ಬೇಗೆಯಲಿ ನೀರಿಲ್ಲದೆ ತತ್ತರಿಸಲು

ಸಾಲದ ಶೂಲದಲಿ ಸಿಲುಕಿ ಬೇಯಲು/

ಬೆಳೆಯೆಲ್ಲ ಒಣಗಿ ಕರಕಲಾಗಲು

ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಾಗಲು//

 

ಹರಹರ ಕಣ್ಣೊರೆಸುವ ನಾಟಕವಾಡುತಿಹರು

ಮಡದಿ ಮಕ್ಕಳು ಹೆತ್ತವರು ಬೀದಿ ಪಾಲಾಗುವರು/

ಉಸಿರಿಗೆ ಕುತ್ತು ತಂದರೆ ಅನಾಥರಾಗುವರು

ರಕ್ಷಿಸು ಭಗವಂತ ರೈತವರ್ಗವೆಂಬ ದೀನರನು//

 

-ರತ್ನಾ ಕೆ.ಭಟ್,ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್