ಅನ್ನದಾತ ಪ್ರಭು
ಕವನ
ಭೂಮಿಗೆ ಬಂದ ದೇವರ ಕಂದ
ಅವನೆ ರೈತನು ಅನ್ನದಾತನು
ಮಣ್ಣಿನ ಮಕ್ಕಳು ಭೂತಾಯ ಒಕ್ಕಲು
ಧರೆಗಿಳಿದು ಬಂದರು ಅನ್ನವ ನೀಡಲು
ಭೂಮಿಯ ಅಗಿದು ನೇಗಿಲ ಹಿಡಿದು
ಬೀಜವ ಬಿತ್ತಿ ಬೆಳೆಯನು ಬೆಳೆದು
ನಾಡಿನ ಜನತೆಗೆ ಅನ್ನವ ನೀಡಿದ
ಅನ್ನದಾತ ಪ್ರಭುವೆ ನಿನಗೆ ಕೈಯನು ಮುಗಿವೆ
ಬೆಳೆಯನು ಬೆಳೆದು ಹಸಿವನ್ನು ನೀಗಿಸಿ
ಪ್ರಾಣಿ ಪಕ್ಷಿ ಕ್ರಿಮಿಕೀಟಗಳನುಳಿಸಿ
ಮರ ಗಿಡ ಬೆಳೆಸಿ ಪ್ರಕೃತಿಯ ರಕ್ಷಿಸಿದ
ಅನ್ನದಾತ ಪ್ರಭುವೆ ನಿನಗೆ ಕೈಯನು ಮುಗಿವೆ
ರೈತನ ಬೆವರಿಂದ ಬೆಳೆದಿದೆ ಪೈರು
ಪೈರ ಹಸಿರಿಂದ ಜನರಿಗೆ ಉಸಿರು
ಹಸಿರನು ಬೆಳೆಸಿ ಹಸಿರನು ಉಳಿಸಿದ
ಅನ್ನದಾತ ಪ್ರಭುವೆ ನಿನಗೆ ಕೈಯನು ಮುಗಿವೆ
ಮಣ್ಣಿಗೆ ಗೆಳೆಯ ಭೂಮಿಗೆ ಒಡೆಯ
ಹಳ್ಳಿಗೆ ದೊರೆಯು ನಾಡಿಗೆ ಹೆಮ್ಮೆಯೂ
ದೇಶಕೆ ಕೀರ್ತಿ ಕೊಡುಗೆಯ ನೀಡಿದ
ಅನ್ನದಾತ ಪ್ರಭುವೆ ನಿನಗೆ ಕೈಯನು ಮೂಗಿವೆ
-ಎಸ್.ನಾಗರತ್ನ, ಚಿತ್ರದುರ್ಗ
ಚಿತ್ರ ಕೃಪೆ: ಇಂಟರ್ನೆಟ್
ಚಿತ್ರ್