ಅನ್ನದ ಸಿಹಿ ಪೊಂಗಲ್

ಅನ್ನದ ಸಿಹಿ ಪೊಂಗಲ್

ಬೇಕಿರುವ ಸಾಮಗ್ರಿ

ಬೆಳ್ತಿಗೆ ಅಕ್ಕಿ ೧ ಕಪ್, ತುಪ್ಪ, ಬೆಲ್ಲದ ಹುಡಿ ಕಾಲು ಕಪ್, ಒಣ ದ್ರಾಕ್ಷಿ, ಗೋಡಂಬಿ, ರುಚಿಗೆ ಉಪ್ಪು, ತೆಂಗಿನಕಾಯಿ ತುರಿ ೪ ಚಮಚ

ತಯಾರಿಸುವ ವಿಧಾನ

ಊಟದ ಬೆಳ್ತಿಗೆ ಅಕ್ಕಿಯನ್ನು ಸ್ವಚ್ಛಗೊಳಿಸಿ, ಒಂದು ಚಮಚ ತುಪ್ಪ ಸೇರಿಸಿ, ೬-೭ ವಿಸಲ್ ಕೂಗಿಸಿ ಕುಕ್ಕರಿನಲ್ಲಿ ಬೇಯಿಸಿಟ್ಟುಕೊಳ್ಳಬೇಕು. ಒಂದು ಬಾಣಲೆಗೆ ಒಂದು ದೊಡ್ಡ ಚಮಚ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿ ಹುರಿದು ತೆಗೆದಿಟ್ಟುಕೊಳ್ಳಬೇಕು. ಬೆಲ್ಲದ ಹುಡಿಗೆ, ಸ್ವಲ್ಪ ನೀರು ಚಿಮುಕಿಸಿ ಒಂದು ನಿಮಿಷ ಸಣ್ಣ ಉರಿಯಲ್ಲಿ ಮಗುಚುತ್ತಾ ಕರಗಿದಾಗ, ಬೇಯಿಸಿಟ್ಟ ಅನ್ನವನ್ನು ಸೇರಿಸಿ, ಚಿಟಿಕೆ ಉಪ್ಪನ್ನು ಹಾಕಿ ಮಿಶ್ರ ಮಾಡಿ, ಸಣ್ಣ ಉರಿಯಲ್ಲಿ ಮಗುಚುತ್ತಿರಬೇಕು. ತೆಂಗಿನಕಾಯಿ ತುರಿ ಸೇರಿಸಿ. ಪಾಕವೆಲ್ಲ ಹದವಾದಾಗ ಕೆಳಗಿಳಿಸಿ, ಹುರಿದ ಗೋಡಂಬಿ ದ್ರಾಕ್ಷಿ, ಎರಡು ಚಮಚ ತುಪ್ಪ ಹಾಕಿ ಹತ್ತು ನಿಮಿಷ ಮುಚ್ಚಿಡಬೇಕು. ಅನ್ನದ ಪೊಂಗಲ್ ಬಿಸಿಯಾಗಿ ತಿನ್ನಲು ಬಹಳ ರುಚಿ.

(ಅನ್ನ ಮತ್ತು ಹೆಸರು ಬೇಳೆ ಮಿಶ್ರ ಮಾಡಿಯೂ ಸಿಹಿ ಹಾಗೂ ಖಾರ ಪೊಂಗಲ್ ಮಾಡಬಹುದು.) 

-ರತ್ನಾ ಕೆ ಭಟ್,ತಲಂಜೇರಿ