ಅನ್ನವೇ ದೇವರು

ಅನ್ನವೇ ದೇವರು

ಕವನ

ಚಿಂದಿ ಚಿಂದಿಯ ಬಟ್ಟೆ ತೊಟ್ಟಿಹ

ಕುಳಿತು ಬಾಲಕ ನೋಡಿದ

ಮಂದಿ ಮಂದಿಯ ನಡುವೆ ವರ್ತನೆ

ಕಂಡು ಅಚ್ಚರಿ ತೋರಿದ ||

 

ಏನೀ ಲೋಕವು ಎಲ್ಲಿ ನಾಕವು

ಮೋಸ ವಂಚನೆ ಸ್ವಾರ್ಥವು

ನನ್ನೀ ನಾಡುವ ಕನ್ನ ಹಾಕುವ

ಕುನ್ನಿ ತುಂಬಿಹ ಲೋಕವು||

 

ಹಸಿವು ಎನ್ನಲು ದಾಹ ಎನ್ನಲು

ನಡದೆ ಹೋದರು ಕೇಳದೆ

ಬಿಸಿಲ ತಾಪವು ಏರಿ ಕೋಪವು

ಹೊಟ್ಟೆ ತಾಳವು ಹಾಕಿದೆ||

 

ಕೈಯ ಚಾಚುತ ಧರ್ಮ ಕೇಳಲು

ಜರಿದು ದೂರಕೆ ದೂಡಲು

ಕಾಲು ಇಲ್ಲದ ಹೆಣ್ಣು ಮಗಳದು

ಹತ್ತು ರೂಪಾಯಿ ಕೊಟ್ಟಳು||

 

ರೈಲು ಗಾಡಿಯ ಕಿಡಕಿಯಿಂದಲಿ

ಬಿತ್ತು ಅನ್ನದ ಪೊಟ್ಟಣ

ನಲುಗಿ ಪೊಟ್ಟಣ ಬಿಚ್ಚಿ ನೋಡಲು

ಒಳಗೆ ಇಡ್ಡಲಿ ಚಟ್ನಿಯು||

 

ಹರ್ಷದಿಂದಲಿ ಹೊಟ್ಟೆ ತುಂಬಿಸಿ

ಕೊಟ್ಟದಾನಿಗೆ ನಮಿಸಿದೆ

ಕಲ್ಲು ದೇವರ ಹೃದಯದಿ ನೆನೆದು

ತಪ್ಪು ಮನಿಸಲು ಬೇಡಿದೆ||

 

-*ಶ್ರೀ ಈರಪ್ಪ ಬಿಜಲಿ* 

 

ಚಿತ್ರ್