ಅಪಘಾತ By prashasti.p on Wed, 11/16/2011 - 19:06 ಕವನ ಆಗದಿರಲಪಘಾತ, ಮನೆಯವರಿಗಾಘಾತ ಅತಿವೇಗ ಬೇಡವೋ ಓ ಮಿತ್ರನೇ ಸರಿಯಿದ್ದ ರಸ್ತೆಯಲೂ ನೂರೆಂಟು ಘಾತಗಳು ಎಂದು ಎದುರಾಗುವುದು ಅರಿಯದವನೆ|೧| ವೇಗಕ್ಕಿಂತ ಅವಯವ ಮುಖ್ಯ ತಿಳುವಳಿಕೆ ಮಾತು ನಿನಗೆ ಅಪಥ್ಯ ಸಮಯದ ಸಬೂಬು ಸಾಯೋಕಲ್ಲ ಮೋದದ ನೆಪದಲಿ ಪ್ರಮಾದ ಸಲ್ಲ|೨| Log in or register to post comments