ಅಪರಂಜಿ
ಕವನ
ನಿನ್ನ ಕಣ್ಣೊಳಗೆ ನಾ ಕಾಣುವ
ತುಂಟಾಟದ ನಗುವಿನ ಅಂತರಾಳದಲಿ
ಅಡಗಿದೆ ಮಾತುಕತೆ ಇಲ್ಲದೆ
ನನ್ನ ಮನ ಮುಟ್ಟಿದ ನಿನ್ನೊಲವು......
ಮಾತು ಮಾತಿಗೂ ನಿನ್ನ
ನಾ ಕಾಡಿಸಿ ಪೀಡಿಸಿ
ದೂರ ಸರಿಸಿದರೂ ನಿನ್ನೆಡೆಗೆ ಅದಾವ
ಸುಡು ಬಿಸಿಲಿಗೂ ಬತ್ತಿ
ಹೋಗದ ಪ್ರೀತಿ ಅನವರತ.........
ನಿನ್ನನುಜೆಯ ತನುಜೆಯಂತೆ
ಸಲಹಿದ ತಾಯಿ ನೀನು....
ನಿನ್ನ ಆ ಪರಿಪೂರ್ಣ ಪ್ರೀತಿಯ
ಪೂರ್ಣಪರಿಯಲಿ ಬಣ್ಣಿಸುವಷ್ಟು
ಪರಿಪಕ್ವಳು ನಾನಲ್ಲ...
ನೀನಿತ್ತ ಒಲವಿಗೆ ಪ್ರತಿಯಾಗಿ
ಈ ಪರಿಯ ಕೋಟಿ-ಕೋಟಿ
ಕವನಗಳ ಹೆಣೆದರೂ
ತುಲನೆಯಾಗಲಿಕ್ಕಿಲ್ಲ.....
ಆ ದೇವರು ನೂರ್ಕಾಲ
ನನ್ನ ಬಾಳ ಬೆಳಕಾಗಿ
ನನಗಿತ್ತ ಕಣ್ಣು ನೀನು ಕಣೋ ಅಣ್ಣಾ....
ನನಗೊದಗಿದ ಅಪರಂಜಿ....
ಅಪ್ಪಟ ಚಿನ್ನ ನೀನೇ ಕಣೋ ಅಣ್ಣಾ.....