ಅಪರಾಧಿ ನಾನಲ್ಲ, ಅಪರಾಧವೆನಗಿಲ್ಲ
ಬರಹ
ಇದು ದಾಸವಾಣಿ. ಫುರಂದರದಾಸರೂ ’ಅಪರಾಧಿ ನಾನಲ್ಲ; ಅಪರಾಧವೆನಗಿಲ್ಲ’ ಎಂದು ಹೇಳಿದ್ದಾರೆ.
ಜಗನ್ನಾಥದಾಸರೂ ಸಹ ’ಇದೇ ಮಾತನ್ನು ತಮ್ಮ ತತ್ವ ಸುವ್ವಾಲಿಯಲ್ಲಿ ಹೇಳಿದ್ದಾರೆ. ಇದರರ್ಥ ಇಷ್ಟೇ: ನಮ್ಮಲ್ಲಿನ ಕ್ರಿಯೆಗಳಿಗೆಲ್ಲ ಭಗವಂತನೇ ಕರ್ತ್ರು. ಆದರೂ ಅವನಿಗೆ ಪಾಪ ಪುಣ್ಯಗಳ ಲೇಶವಿಲ್ಲ. ಅವನು ಸ್ವತಂತ್ರ. ನಾವು ಸ್ವತಂತ್ರರಲ್ಲ.
ಹೀಗಿದ್ದ ಮೇಲೆ ಭಗವಂತನು ನಮ್ಮೊಳಗಿದ್ದು ಮಾಡಿಸಿದ ಕ್ರಿಯೆಗಳ ಪಾಪ ಪುಣ್ಯಗಳಿಗೆ ನಾವೇ ಭಾಜನರು ಹೇಗೆ?
ತತ್ವ ಸುವ್ವಾಲಿಯ ಇನ್ನೊಂದು ಪದ: ’ರಕ್ಕಸರೊಳಗಿದ್ದು ನೀ ಮಾಡಿ ಮಾಡಿಸುತ ಕ್ರೂರ ಕರ್ಮವ’ ಎಂಬುದಾಗಿ ಕೂಡ ಹೇಳಿದ್ದಾರೆ. ಇದು ಹೇಗೆ?