ರಂಗನ ತಿಟ್ಟಿನಲ್ಲಿ ದೋಣಿವಿಹಾರ ನಡೆದಿತ್ತು .ಎಲ್ಲೆಲಿಂದಲೋ ಬಂದ ಪ್ರವಾಸಿಗಳು ದೋಣಿಯಲ್ಲಿ ತೇಲಿ ಹಕ್ಕಿಗಳ ಕಂಡು ನಲಿದಿದ್ದರು.ಅಲ್ಲೇ ಹತ್ತಿರದಲ್ಲೆ ಸಾಗಿತ್ತು ಒಂದು ಮೊಸಳೆ !! ಶುರುವಾಯ್ತಲ್ಲ ಜನಗಳ ತಳಮಳ !ಒಬ್ಬ ಹೇಳಿದ ಏ ಹುಷಾರು ಹಿಂದೆ ಇಲ್ಲಿ ಒಂದು ಮೊಸಳೆ ಒಂದು ಮಗುವನ್ನು ದೋಣಿಯಿಂದ ಎಳೆದು ನುಂಗಿತ್ತು ಗೊತ್ತ!!! ಅಂದ ಆಗ ಶುರುವಾಯ್ತು ನೋಡಿ ಪಕ್ಕ ವಾದ್ಯಗಾರರ ಹಿಮ್ಮೇಳ !! ನೋಡಿದವರಿಗಿಂತ ಹೆಚ್ಚಾಗಿ ತಲಾ ಒಂದೊಂದು ಮಾತು,ಅನುಭವ ಎಲ್ಲ ಮೊಸಳೆಗಳ ಜನ್ಮ ಜಾಲಾದುವವರೇ !!!ಆಗ ಕೇಳ್ದೆ ಸ್ವಾಮೀ ಮೊಸಳೆ ಮಗು ನುಂಗಿದ್ದು ಯಾವಾಗ?ಅಂತ ,ಸಾರ್ ಸುಮಾರು ಹತ್ತು ವರ್ಷದ ಹಿಂದೆ ,ಪೇಪರ್ನಲ್ಲಿ ಬಂದಿತ್ತು ಅಂತ ನನ್ನ ಸ್ನೇಹಿತ ಹೇಳಿದ್ದ ಅನ್ನೋದೇ !!ಅಲ್ಲ ಸ್ವಾಮೀ ನಾನು ಸುಮಾರು ಹದಿನೈದು ವರ್ಷಗಳಿಂದ ಇಲ್ಲಿಗೆ ಬರ್ತಾಯಿದ್ದಿನಿ ಯಾವ್ದು ಈ ತರ ಆಗಿಲ್ವಲ್ಲ ಅಂದ್ರೆ ಯಾರದು ಮಾತೆ ಇಲ್ಲ !ಅದಕ್ಕೆ ಹೇಳೋದು ಮನುಷ್ಯ ಯಾವ್ದೇ ಪ್ರಾಣಿ ಕಂಡರೂ ಕತೆ ಕಟ್ಟೊದು ನಿಜ ಅಂತ ಅನ್ಸಿತು! ಪಾಪ ರಂಗನ ತಿಟ್ಟಿನ ಮೊಸಳೆಗಳಿಗೆ ಅಪರಾದಿ ಸ್ಥಾನ .ಅಂದು ಕೊಳ್ಳುತಿದ್ದೆ !! ನನ್ನ ಕ್ಯಾಮರ ಕಣ್ಣಲ್ಲಿ ಸಿಕ್ಕ ಮೊಸಳೆಗಳು ಕೂಗಿ ,ಕೂಗಿ ಹೇಳುತ್ತಿದ್ದವು ಅಪರಾಧಿ ನಾವಲ್ಲ !!!!! ಮುಂದಿನ ಭಾರಿ ರಂಗನ ತಿಟ್ಟಿಗೆ ಬಂದಾಗ ಮೊಸಳೆಗಳು ಸಿಕ್ಕಾಗ ನಿರಾಳವಾಗಿ ನೋಡಿ ಆನಂದಿಸಿ ,ತಪ್ಪು ಕಲ್ಪನೆಗಳಿಗೆ ಒಳಗಾಗಬೇಡಿ ,ತಪ್ಪು ಮಾಹಿತಿ ನೀಡಬೇಡಿ ಓ.ಕೆ
Comments
ಉ: ಅಪರಾಧಿ ನಾನಲ್ಲ!!! ಎಂದಿವೆ !ರಂಗನ ತಿಟ್ಟಿನ ಮೊಸಳೆಗಳು !! ಸುಳ್ಳು ...
In reply to ಉ: ಅಪರಾಧಿ ನಾನಲ್ಲ!!! ಎಂದಿವೆ !ರಂಗನ ತಿಟ್ಟಿನ ಮೊಸಳೆಗಳು !! ಸುಳ್ಳು ... by kamalap09
ಉ: ಅಪರಾಧಿ ನಾನಲ್ಲ!!! ಎಂದಿವೆ !ರಂಗನ ತಿಟ್ಟಿನ ಮೊಸಳೆಗಳು !! ಸುಳ್ಳು ...