ಅಪರೂಪದ ದೇವಾಲಯ
ಕೇಂದ್ರದ ಮಾಜಿ ಸಚಿವ ಶಶಿ ತರೂರ್ ತಮ್ಮ ‘ಟ್ವಿಟ್ಟರ್’ ಪುಟದಲ್ಲಿ ಕೇರಳದ ದೇವಾಲಯವೊಂದರ ಸ್ವಾರಸ್ಯದ ಬಗ್ಗೆ ಇಂದು ರಾತ್ರಿ (ಮಧ್ಯ ರಾತ್ರಿ) ಬರೆದಿದ್ದರು. ಅವರು ನೋಡಿದ ದೇವಾಲಯದಲ್ಲಿ ಗಣೇಶ ಮತ್ತು ಶ್ರೀ ಕೃಷ್ಣರ ವಿಗ್ರಹಗಳು ಒಟ್ಟಿಗೆ ಇದ್ದು, ಹೀಗೆ ಈ ಎರಡು ದೇವರುಗಳು ಜೊತೆಯಾಗಿ ಇರುವ ದೇವಾಲಯ ಬೇರೆಯೂ ಇದೆಯೇ ಎಂದು ಕೇಳಿದ್ದಾರೆ. ಕೇರಳದ ಕೋಟ್ಟಯಂ ಜಿಲ್ಲೆಯ ಕುರುಪ್ಪಂತರ ಸ್ಥಳದಲ್ಲಿ ಇರುವ ಈ ಅಪರೂಪದ ದೇವಾಲಯದ ಬಗ್ಗೆ ನನಗೂ ಆಸಕ್ತಿ ಹುಟ್ಟಿತು ಮಧ್ಯ ರಾತ್ರಿ ಯಲ್ಲಿ. ನೆಟ್ ಬಂಟ ಗೂಗ್ಲ್ ನಮಗಾಗಿ ಮತ್ತು ಇಂಥ ಕುತೂಹಲ ತಣಿಸಲು ತಾನೇ ಇರುವುದು? ಕೆಲವೇ ಸೆಕೆಂಡುಗಳಲ್ಲಿ ದೇವಾಲಯ ತೆರೆದು ಕೊಂಡಿತು. “ಮಳ್ಳಿಯೂರ್ ಶ್ರೀ ಗಣೇಶಾಯ ನಮಃ, ಅವಿಘನಮಸ್ತು ಶ್ರೀ ಕೃಷ್ಣಾಯ ನಮಃ” ಎನ್ನುವ ಬ್ಯಾನರ್ ಹೊತ್ತ ಈ ವೆಬ್ ತಾಣದಲ್ಲಿ ಸುಂದರ ಮಂದಿರದ ಚಿತ್ರವಿದೆ. ಈ ಮಂದಿರದಲ್ಲಿ ಶ್ರೀ ಗಣೇಶನ ತೊಡೆಯ ಮೇಲೆ ಶ್ರೀ ಕೃಷ್ಣ ಆಸೀನನಾಗಿದ್ದಾನೆ. ಈ ದೇವಾಲಯದ ವೆಬ್ ತಾಣ ದ ವಿಳಾಸ
http://www.malliyoortemple.com/docs/Main.asp
ಹಾಗೆಯೇ ಇಂಥದ್ದೇ ಬೇರೊಂದು ದೇವಾಲಯದ ಬಗ್ಗೆ ಗೊತ್ತಿದ್ದರೆ ದಯಮಾಡಿ ಶಶಿ ತರೂರರಿಗೆ ಟ್ವೀಟ್ ಮಾಡಿ ಪುಣ್ಯ ಕಟ್ಟಿಕೊಳ್ಳಿ.
ವಿ.ಸೂ. ಪುಟ್ಟ ಲೇಖನವನ್ನ ‘ಲೇಖನ’ ವಿಭಾಗಕ್ಕೆ ಸೇರಿಸದೆ ‘ವೈಯಕ್ತಿಕ ಬ್ಲಾಗ್’ ವಿಭಾಗಕ್ಕೆ ಸೇರಿಸಿ ಎಂದು ಒಬ್ಬರಿಗೆ ಸಲಹೆ ನೀಡಿದ್ದೆ. ಈ ಮೇಲಿನ ನನ್ನ ಬರಹವೂ ಬ್ಲಾಗ್ ಬರಹದ ಅಳತೆಯಲ್ಲೇ ಇದ್ದರೂ ಎಲ್ಲರೂ ಗಮನಿಸಲಿ ಎನ್ನುವ ಉದ್ದೇಶದಿಂದ ಲೇಖನ ವಿಭಾಗಕ್ಕೆ ಸೇರಿಸಿದ್ದೇನೆ.