ಅಪಾರ ಔಷಧಿ ಗುಣವುಳ್ಳ ಕಸ್ತೂರಿ ಅರಿಶಿಣ

ಅಪಾರ ಔಷಧಿ ಗುಣವುಳ್ಳ ಕಸ್ತೂರಿ ಅರಿಶಿಣ

ಇದು ಸ್ವಲ್ಪ ಮಟ್ಟಿಗೆ ಅರಿಶಿಣವೂ ಅಲ್ಲ, ಶುಂಠಿಯನ್ನೂ ಹೋಲುವುದಿಲ್ಲ. ಆದರೆ ಇದರ ಪರಿಮಳ, ಸವಿ ಮತ್ತು ಬಣ್ಣದಿಂದ ಬೇಗನೇ ಗುರುತಿಸಬಹುದು. ಇದರ ಗಡ್ಡೆಯ ಔಷಧಿ ಗುಣ ಅಪಾರವಾಗಿದೆ. 

* ಇದರ ಹಸಿ ಗಡ್ಡೆ ಅರೆದು ಪೇಸ್ಟ್ ಮಾಡಿ ಕುರುವಿಗೆ ಹಚ್ಚಿದರೆ ಒಡೆದು ಗುಣವಾಗುತ್ತದೆ.

* ಗಡ್ಡೆ ಪೇಸ್ಟ್ ಮಾಡಿ ಬೆಲ್ಲ ಸೇರಿಸಿ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡು ಸ್ವಲ್ಪ ಹೊತ್ತು ನೀರು ಕುಡಿಯದಿದ್ದರೆ ಉದರ ಕ್ರಿಮಿನಾಶ ಮಾಡುತ್ತದೆ.

* ಇದರ ಎಲೆಗಳನ್ನು ಅರೆದು ಹಳೆಯ ಬೆಲ್ಲ ಸೇರಿಸಿ ಕಿಬ್ಬೊಟ್ಟೆಗೆ ಹಚ್ಚಿದರೆ ಕಷ್ಟಾರ್ತವ(ಮೆನ್ಸಸ್ ಪೇನ್) ಗುಣವಾಗುತ್ತದೆ.

* ಗಡ್ಡೆ ಒಣಗಿಸಿ ಪುಡಿ ಮಾಡಿ ತುಪ್ಪವನ್ನು ಸೇರಿಸಿ ಹಚ್ಚಿದರೆ ಗಾಯ ಮತ್ತು ಚರ್ಮದ ಕಾಯಿಲೆಗಳು ಬೇಗನೆ ಗುಣವಾಗುತ್ತದೆ.

* ಪುಡಿಯನ್ನು ಹುತ್ತದ ಮಣ್ಣಿನ ಜೊತೆಗೆ ಸೇರಿಸಿ ಹಚ್ಚಿ ಸ್ನಾನ ಮಾಡಿದರೆ ಯಾವ ಬ್ಯೂಟಿ ಸೋಪ್ ಇದಕ್ಕೆ ಸರಿಸಾಟಿ ಆಗಲಾರದು.

* ಪುಡಿ (ಹುಡಿ) ಅರಿಶಿಣವನ್ನು ಬೇವಿನ ಎಲೆ ಸೇರಿಸಿ ನುಣ್ಣಗೆ ರುಬ್ಬಿ ಮೊಡವೆಗೆ ಹಚ್ಚಿ ಕಲೆಗಳು ಸಹ ಗುಣವಾಗುತ್ತದೆ.

* ಕೆಂಡದ ಮೇಲೆ ಪುಡಿಯನ್ನು ಹಾಕಿ ಘಾಟನ್ನು ಆಗ್ರಾಣಿಸುವುದರಿಂದ ಮೂಗು ಕಟ್ಟುವುದು ಗುಣವಾಗುತ್ತದೆ.

-ಸುಮನಾ ಮಳಲಗದ್ದೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ