ಅಪ್ಪಂದಿರ ದಿನಕ್ಕಾಗಿ ಒಂದು ಗಝಲ್
ಕವನ
*ಚೆಲುವಿನ ಬದುಕನ್ನು ರೂಪಿಸಿದವನು ಅಪ್ಪ*
*ಒಲವಿನ ಶರಧಿಯಲಿ ತೋಯಿಸಿದವನು ಅಪ್ಪ*
*ತನ್ನವರ ಒಳಿತಿಗಾಗಿ ಬದುಕನ್ನು ಮುಡಿಪಾಗಿಟ್ಟನಲ್ಲವೇ*
*ಕಣ್ಣರೆಪ್ಪೆಯಂತೆ ಮಕ್ಕಳನ್ನು ಸಲಹಿದವನು ಅಪ್ಪ*
*ಒಡೆತನವ ಎಂದೆಂದೂ ಆಶಿಸದ ಮನಸ್ಸಾಗಿತ್ತು*
*ಬಡತನದ ಕುಲುಮೆಯಲಿ ಬೆಂದವನು ಅಪ್ಪ*
*ಸತ್ಯ ನ್ಯಾಯ ಧರ್ಮವು ಅಡಿಪಾಯಗಳೆಂದನು*
*ಪಥ್ಯವಾಗದಿರೆ ದೂರವಿದ್ದು ಸಾಧಿಸೆಂದವನು ಅಪ್ಪ*
*ಹುಟ್ಟುಆಕಸ್ಮಿಕ ಸಾವು ನಿಶ್ಚಿತ ರತುನ*
*ಹೊಟ್ಟೆ ಹಸಿವನ್ನು ನೀಗಿಸಿದವನು ಅಪ್ಪ*
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್